ಬೆಂಗಳೂರು: ನಿರಂತರವಾಗಿ ಸುರಿದ ಮಳೆಯಿಂದಾಗಿ ಸಿಲಿಕಾನ್ ಸಿಟಿ ಬೆಂಗಳೂರು ತತ್ತರಗೊಂಡಿದ್ದು, ಅದರಲ್ಲಿಯೂ ಯಲಹಂಕದಲ್ಲಿರುವ ಕೇಂದ್ರೀಯ ವಿಹಾರ್ ಅಪಾರ್ಟ್ ಮೆಂಟ್ ಜಲದಿಗ್ಬಂಧನಕ್ಕೊಳಗಾಗಿದೆ. ಅಪಾರ್ಟ್ ಮೆಂಟ್ ನಿವಾಸಿಗಳು ಮನೆಯಿಂದ ಹೊರಬರಲಾಗದೇ ಪರದಾಡುತ್ತಿದ್ದಾರೆ.
ಕೇಂದ್ರೀಯ ವಿಹಾರ್ ಅಪಾರ್ಟ್ ಮೆಂಟ್ ನ ಸಮೀಪವೇ ಇರುವ ಕೆರೆ ಕೋಡಿ ಒಡೆದು ಅಪಾರ್ಟ್ ಮೆಂಟ್ ನ ಬೇಸ್ಮೆಂಟ್ ಗೆ ನೀರು ನುಗ್ಗಿ, 5 ಅಡಿವರೆಗೆ ನಿಂತಿದೆ. ಅಪಾರ್ಟ್ ಮೆಂಟ್ ನಲ್ಲಿರುವ 2 ಸಾವಿರಕ್ಕೂ ಹೆಚ್ಚು ಜನರು ಕಳೆದ ಮೂರು ದಿನಗಳಿಂದ ಮನೆಯಿಂದ ಹೊರ ಬರಲಾಗದೇ ಸಂಕಷ್ಟಕ್ಕೀಡಾಗಿದ್ದಾರೆ. ಅಪಾರ್ಟ್ ಮೆಂಟ್ ನಲ್ಲಿ ವಿದ್ಯುತ್ ಸಂಪರ್ಕವೂ ಕಡಿತಗೊಂಡಿದೆ.
ಶ್ರೀಗಳ ಒತ್ತಾಯಕ್ಕೆ ಮಣಿದ ರೈಲ್ವೇ ಇಲಾಖೆ: ರಾಮಾಯಣ ಎಕ್ಸ್ಪ್ರೆಸ್ ಸಿಬ್ಬಂದಿಯ ಡ್ರೆಸ್ ಕೋಡ್ ಬದಲಾವಣೆ..!
ಕೇಂದ್ರೀಯ ವಿಹಾರ್ ಅಪಾರ್ಟ್ ಮೆಂಟ್ ಗೆ ಭೇಟಿ ನೀಡಿದ ಸಿಎಂ ಬಸವರಾಜ್ ಬೊಮ್ಮಾಯಿ, ಮಳೆಹಾನಿ ಕುರಿತು ಪರಿಶೀಲನೆ ನಡೆಸಿದರು. ಅಪಾರ್ಟ್ ಮೆಂಟ್ ನ ಸಮೀಪ ಎರಡು ಕೆರೆಗಳಿದ್ದು ಮಳೆಯಿಂದಾಗಿ ಕೆರೆಗಳು ತುಂಬಿ ಹರಿದಿವೆ. ಅಲ್ಲದೇ ಅಪಾರ್ಟ್ ಮೆಂಟ್ ಸುತ್ತಮುತ್ತ ರಾಜಕಾಲುವೆ ಒತ್ತುವರಿ ಮಾಡಿರುವುದರಿಂದ ಚರಂಡಿ ನೀರು ಸರಾಗವಾಗಿ ಹರಿಯದೇ ಅಪಾರ್ಟ್ ಮೆಂಟ್ ಕಡೆಗೆ ನುಗ್ಗಿದೆ. ಇದರಿಂದಾಗಿ ಅಪಾರ್ಟ್ ಮೆಂಟ್ ಬೇಸ್ ಮೆಂಟ್ ನಲ್ಲಿ ನೀರು ನಿಂತು ಅನಾಹುತಗಳು ಸಂಭವಿಸಿವೆ. ಮಳೆ ನಿಲ್ಲುತ್ತಿದ್ದಂತೆ ಒತ್ತುವರಿ ತೆರವು ಮಾಡಲಾಗುವುದು. ಅಪಾರ್ಟ್ ಮೆಂಟ್ ಗೆ ಅಗತ್ಯ ಕಾಲುವೆ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದರು.