alex Certify ಕೆಲಸದ ಒತ್ತಡದಿಂದ ಪುರುಷರಲ್ಲಿ ಕಡಿಮೆಯಾಗುತ್ತಿದೆ ಲೈಂಗಿಕ ಬಯಕೆ; ಈ ಆಹಾರಗಳಲ್ಲಿದೆ ಸಮಸ್ಯೆಗೆ ಪರಿಹಾರ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೆಲಸದ ಒತ್ತಡದಿಂದ ಪುರುಷರಲ್ಲಿ ಕಡಿಮೆಯಾಗುತ್ತಿದೆ ಲೈಂಗಿಕ ಬಯಕೆ; ಈ ಆಹಾರಗಳಲ್ಲಿದೆ ಸಮಸ್ಯೆಗೆ ಪರಿಹಾರ…..!

ಧಾವಂತದ ಬದುಕು ನಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಒತ್ತಡ ಮತ್ತು ಅತಿಯಾದ ಕೆಲಸದಿಂದಾಗಿ ಪುರುಷರಲ್ಲಿ ಲೈಂಗಿಕ ಬಯಕೆ ಕಡಿಮೆಯಾಗುತ್ತದೆ. ಇದಕ್ಕೆ ಪರಿಹಾರ ಕಂಡುಕೊಳ್ಳಲು ಆಸ್ಪತ್ರೆಗೆ ಅಲೆಯುವುದು ಸಹಜ. ಆದರೆ ಪುರುಷರ ಈ ಸಮಸ್ಯೆಗಳಿಗೆ ಕೆಲವೊಂದು ನಿರ್ದಿಷ್ಟ ಆಹಾರಗಳಲ್ಲೇ ಪರಿಹಾರವಿದೆ. ಆರೋಗ್ಯಕರ ಅಭ್ಯಾಸಗಳು ಮತ್ತು ಜೀವನಶೈಲಿಯ ಮೂಲಕ ಲೈಂಗಿಕ ಬಯಕೆಯ ಕೊರತೆಯನ್ನು ಹೋಗಲಾಡಿಸಬಹುದು. ಇದಕ್ಕಾಗಿ ಕೆಲವೊಂದು ಆಹಾರಗಳನ್ನು ಪುರುಷರು ಸೇವನೆ ಮಾಡಬೇಕು.

ದಾಳಿಂಬೆ: ದಾಳಿಂಬೆ ಪುರುಷರಿಗೆ ಪ್ರಯೋಜನಕಾರಿಯಾಗಿದೆ. ದಾಳಿಂಬೆ ತಿನ್ನುವುದರಿಂದ ಪುರುಷರಲ್ಲಿ ನಿಮಿರುವಿಕೆಯ ದೋಷದ ಸಮಸ್ಯೆ ದೂರವಾಗುತ್ತದೆ. ದಾಳಿಂಬೆ ರಸವು ಉತ್ಕರ್ಷಣ ನಿರೋಧಕಗಳನ್ನು ಹೊಂದಿದ್ದು, ರಕ್ತದ ಹರಿವನ್ನು ಸರಿಯಾಗಿಡಲು ಸಹಾಯ ಮಾಡುತ್ತದೆ. ಹಾಗಾಗಿ ಪುರುಷರು ಪ್ರತಿದಿನ ದಾಳಿಂಬೆ ಸೇವಿಸಬೇಕು.

ಕಿಣ್ಣೋವಾ : ಇದು ಎಲ್ಲರಿಗೂ ಪ್ರಯೋಜನಕಾರಿ. ಹೆಚ್ಚಿನ ನಾರಿನಂಶವಿರುವ ಈ ಆಹಾರವನ್ನು ತಿನ್ನುವುದರಿಂದ ದೀರ್ಘಕಾಲದವರೆಗೆ ಹೊಟ್ಟೆಯು ತುಂಬಿರುತ್ತದೆ ಮತ್ತು ದೇಹದಲ್ಲಿ ಶಕ್ತಿಯು ಉಳಿಯುತ್ತದೆ. ಹಾಗಾಗಿ ಪುರುಷರು ಪ್ರತಿದಿನ ಕಿಣ್ಣೋವಾವನ್ನು  ಸೇವಿಸಬೇಕು.

ನಟ್ಸ್‌: ಪುರುಷರು ಲೈಂಗಿಕ ಬಯಕೆಯ ಕೊರತೆಯನ್ನು ಅನುಭವಿಸಿದರೆ ನಿಯಮಿತವಾಗಿ ನಟ್ಸ್‌ ಸೇವನೆ ಮಾಡಬೇಕು. ನಟ್ಸ್‌ ನಮ್ಮ ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ವಾಲ್ನಟ್, ಕಡಲೆಕಾಯಿ ಮತ್ತು ಪಿಸ್ತಾ ಸೇವನೆ ಅತ್ಯಂತ ಸೂಕ್ತ.

ಬೆಳ್ಳುಳ್ಳಿ: ಬೆಳ್ಳುಳ್ಳಿ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಬೆಳ್ಳುಳ್ಳಿಯ ಸಹಾಯದಿಂದ ದೇಹದ ಸ್ಟಾಮಿನಾ ಹೆಚ್ಚಾಗುತ್ತದೆ. ಬೆಳ್ಳುಳ್ಳಿಯು ರಕ್ತನಾಳಗಳ ರಕ್ತವನ್ನು ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ. ಬೆಳ್ಳುಳ್ಳಿಯು ಹೃದಯವನ್ನು ಆರೋಗ್ಯಕರವಾಗಿಡುವುದರ ಜೊತೆಗೆ ಕೊಬ್ಬಿನ ರಚನೆಯನ್ನು ತಡೆಯುತ್ತದೆ.

ಬಾಳೆಹಣ್ಣು : ಬಾಳೆಹಣ್ಣಿನಲ್ಲಿ ಪೊಟ್ಯಾಸಿಯಮ್ ಪ್ರಮಾಣವು ತುಂಬಾ ಹೆಚ್ಚಾಗಿದೆ. ಸ್ನಾಯುಗಳನ್ನು ನಿರ್ಮಿಸುವುದರ ಜೊತೆಗೆ, ಇದು ಸಾಕಷ್ಟು ಶಕ್ತಿಯನ್ನು ನೀಡುತ್ತದೆ. ದೇಹದ ಪ್ರತಿ ಭಾಗದಲ್ಲೂ ರಕ್ತದ ಹರಿವನ್ನು ಇದು ಸುಸೂತ್ರವಾಗಿಡುತ್ತದೆ. ಪುರುಷರು ನಿಯಮಿತವಾಗಿ ಬಾಳೆಹಣ್ಣು ಸೇವಿಸುವುದರಿಂದ ಲೈಂಗಿಕ ಸಮಸ್ಯೆಗಳು ದೂರವಾಗುತ್ತವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...