alex Certify ಕೆರಳಿದ ಗೂಳಿಯಿಂದ ಪುತ್ರನನ್ನು ರಕ್ಷಿಸಲು ಪ್ರಾಣವನ್ನೇ ಪಣಕ್ಕಿಟ್ಟ ತಂದೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೆರಳಿದ ಗೂಳಿಯಿಂದ ಪುತ್ರನನ್ನು ರಕ್ಷಿಸಲು ಪ್ರಾಣವನ್ನೇ ಪಣಕ್ಕಿಟ್ಟ ತಂದೆ..!

ಕೆರಳಿದ ಗೂಳಿಯಿಂದ ಮಗನನ್ನು ರಕ್ಷಿಸುವ ಸಲುವಾಗಿ ತಂದೆಯೊಬ್ಬ ತನ್ನ ಪ್ರಾಣವನ್ನೇ ಪಣಕ್ಕಿಟ್ಟ ಮೈ ಜುಮ್ಮೆನ್ನುವ ಘಟನೆ ಅಮೆರಿಕದ ಟೆಕ್ಸಾಸ್‌ನಲ್ಲಿ ನಡೆದಿದೆ.

ತಂದೆಯೊಬ್ಬ ತನ್ನ ಮಗನನ್ನು ಕೆರಳಿದ ಗೂಳಿಯಿಂದ ರಕ್ಷಿಸಲು ತನ್ನ ಪ್ರಾಣವನ್ನೇ ಪಣಕ್ಕಿಟ್ಟಿರುವ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಲಾಗಿದ್ದು, ಭಾರಿ ವೈರಲ್ ಆಗಿದೆ. ಬೆಲ್ ಕೌಂಟಿ ಎಕ್ಸ್‌ಪೋ ಸೆಂಟರ್‌ನಲ್ಲಿರುವ ರೋಡಿಯೊದಲ್ಲಿ ಈ ಘಟನೆ ಸಂಭವಿಸಿದೆ.

ಭಯಾನಕ ಘಟನೆಯನ್ನು 18 ವರ್ಷದ ಕೋಡಿ ಹುಕ್ಸ್ ಹಂಚಿಕೊಂಡಿದ್ದಾರೆ. 19-ಸೆಕೆಂಡ್ ಕ್ಲಿಪ್‌ನಲ್ಲಿ, ಕೋಡಿ ಗೂಳಿಯ ಮೇಲೆ ರಿಂಗ್ ಪ್ರವೇಶಿಸಿದ್ದಾನೆ. ಆದರೆ, ಕೋಡಿ ಹಿಂಸಾತ್ಮಕವಾಗಿ ಗೂಳಿಯಿಂದ ಎಸೆಯಲ್ಪಟ್ಟಿದ್ದಾನೆ. ಗೂಳಿ ಕಾಳಗದವರು ಕೆರಳಿದ ಗೂಳಿಯನ್ನು ಶಾಂತಗೊಳಿಸಲು ಪ್ರಯತ್ನಿಸಿದರೆ, ಕೋಡಿ ನೆಲದ ಮೇಲೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದಾನೆ.

ಶಾಂತಗೊಳ್ಳದ ಗೂಳಿಯು ಕೋಡಿ ಮೇಲೆ ಮತ್ತೆ ಆಕ್ರಮಣಕ್ಕೆ ಮುಂದಾಗುತ್ತದೆ. ಈ ವೇಳೆ ಕೋಡಿಯ ತಂದೆ ಲ್ಯಾಂಡಿಸ್ ಕೂಡಲೇ ತನ್ನ ಮಗನ ದೇಹದ ಬಳಿ ದೌಡಾಯಿಸಿದ್ದಾರೆ. ಪುತ್ರನ ದೇಹವನ್ನು ತನ್ನ ದೇಹದಿಂದ ಮುಚ್ಚಿ ಪ್ರಾಣವನ್ನೇ ಒತ್ತೆಯಿಟ್ಟಿದ್ದಾರೆ. ಕೆರಳಿದ ಗೂಳಿಯು ದಾಳಿ ಮಾಡಿದೆ. ಕೂಡಲೇ ಗೂಳಿ ಕಾಳಗದವರು ಮತ್ತೆ ಪ್ರಾಣಿಯನ್ನು ಒಯ್ದಿದ್ದಾರೆ. ಅದೃಷ್ಟವಶಾತ್ ಸಣ್ಣಪುಟ್ಟ ಗಾಯಗಳೊಂದಿಗೆ ಇಬ್ಬರು ಪಾರಾಗಿದ್ದಾರೆ.

ಆನ್‌ಲೈನ್‌ನಲ್ಲಿ ಹಂಚಿಕೊಂಡ ನಂತರ, ವಿಡಿಯೋ ಸುಮಾರು 2 ಲಕ್ಷ ವೀಕ್ಷಣೆಗಳನ್ನು ಗಳಿಸಿದೆ. ನೆಟ್ಟಿಗರು ಲ್ಯಾಂಡಿಸ್‌ನ ಧೈರ್ಯವನ್ನು ಶ್ಲಾಘಿಸಿದ್ದಾರೆ. ಕಾಮೆಂಟ್‌ಗಳ ವಿಭಾಗದಲ್ಲಿ ಅವರನ್ನು ಹೀರೋ ಎಂದು ಕರೆದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...