alex Certify ಕೆಜಿಎಫ್ 2 ಸಿನಿಮಾ ವೀಕ್ಷಿಸುವಾಗಲೇ ಪ್ರೇಕ್ಷಕನ ಮೇಲೆ ಗುಂಡೇಟು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೆಜಿಎಫ್ 2 ಸಿನಿಮಾ ವೀಕ್ಷಿಸುವಾಗಲೇ ಪ್ರೇಕ್ಷಕನ ಮೇಲೆ ಗುಂಡೇಟು…!

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ 2 ಸಿನೆಮಾ ವಿಶ್ವದಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಭಾರತೀಯ ಸಿನಿಮಾ ರಂಗದಲ್ಲಿ ಈ ಚಿತ್ರ ಹೊಸ ದಾಖಲೆ ಬರೆದಿದ್ದು, ಬಾಲಿವುಡ್ ಚಿತ್ರಗಳ ಈವರೆಗಿನ ಗಳಿಕೆಯನ್ನೂ ಮೀರಿಸಿದೆ. ಈ ಚಿತ್ರ ತುಂಬಿದ ಗೃಹಗಳಲ್ಲಿ ಪ್ರದರ್ಶನ ಕಾಣುತ್ತಿರುವಾಗಲೇ ಹಾವೇರಿ ಜಿಲ್ಲೆಯ ಶಿಗ್ಗಾವಿ ಪಟ್ಟಣದಲ್ಲಿ ಅಹಿತಕರ ಘಟನೆಯೊಂದು ನಡೆದಿದೆ.

ಶಿಗ್ಗಾಂವಿ ಪಟ್ಟಣದ ರಾಜಶ್ರೀ ಚಿತ್ರಮಂದಿರದಲ್ಲಿ ಪ್ರದರ್ಶನವಾಗುತ್ತಿರುವ ಕೆಜಿಎಫ್ 2 ಸಿನಿಮಾ ನೋಡಲು ಮುಗಳಿ ಗ್ರಾಮದ ವಾಸಿ 28 ವರ್ಷದ ವಸಂತಕುಮಾರ ಸಣ್ಣ ಕಲ್ಲಪ್ಪ ಶಿವಪುರ ತನ್ನ ಮೂವರು ಸ್ನೇಹಿತರೊಂದಿಗೆ ಮಂಗಳವಾರ ರಾತ್ರಿ ಬಂದಿದ್ದ. ಈ ವೇಳೆ ಆತ ತನ್ನ ಮುಂದಿನ ಸೀಟಿನ ಮೇಲೆ ಕಾಲಿಟ್ಟಿದ್ದನೆನ್ನಲಾಗಿದೆ.

ಇದರಿಂದಾಗಿ ಮುಂದಿನ ಸೀಟಿನಲ್ಲಿ ಕುಳಿತಿದ್ದವನು ವಸಂತನ ಜೊತೆ ಜಗಳವಾಡಿದ್ದಾನೆ. ಬಳಿಕ ಹತ್ತು ನಿಮಿಷಗಳ ಕಾಲ ಹೊರ ಹೋದ ಆತ ಗನ್ ತೆಗೆದುಕೊಂಡು ಬಂದು ವಸಂತಕುಮಾರನ ಮೇಲೆ ಗುಂಡು ಹಾರಿಸಿದ್ದು, ಇದರಿಂದ ಆತನ ಕಾಲಿಗೆ ಗಾಯವಾಗಿದೆ ಎನ್ನಲಾಗಿದೆ. ಗುಂಡಿನ ಶಬ್ದ ಕೇಳಿದರೆ ಚಿತ್ರಮಂದಿರದಲ್ಲಿದ್ದ ಪ್ರೇಕ್ಷಕರು ಚೆಲ್ಲಾಪಿಲ್ಲಿಯಾಗಿ ಓಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಗುಂಡು ಹಾರಿಸಿದ ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...