alex Certify ಕೆಜಿಎಫ್ ಬಳಿಕ ಮತ್ತೊಂದು ದೊಡ್ಡ ಪ್ರಾಜೆಕ್ಟ್ ಗೆ ‘ಎಸ್’ ಅಂದ್ರಾ ರಾಕಿಂಗ್ ಸ್ಟಾರ್..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೆಜಿಎಫ್ ಬಳಿಕ ಮತ್ತೊಂದು ದೊಡ್ಡ ಪ್ರಾಜೆಕ್ಟ್ ಗೆ ‘ಎಸ್’ ಅಂದ್ರಾ ರಾಕಿಂಗ್ ಸ್ಟಾರ್..!

ನಟ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ 2 ಸಿನಿಮಾ ರಿಲೀಸ್ ಆಗಿ ದಾಖಲೆ ಮೇಲೆ ದಾಖಲೆ ಬರೆದಿದೆ. ಕೆಜಿಎಫ್ 3 ಕೂಡ ಬರಲಿದೆ ಅಂತ ಅಭಿಮಾನಿಗಳು ಹೇಳ್ತಾ ಇದ್ದಾರೆ. ಆದರೆ ಚಿತ್ರತಂಡ ಇನ್ನೂ ಕನ್ಫರ್ಮ್ ಮಾಡಿಲ್ಲ.

ಇದೆಲ್ಲದರ ಹೊರತಾಗಿ ಯಶ್ ಮುಂದಿನ ಸಿನಿಮಾ ಯಾವುದು ಅನ್ನೋ ಕಾತುರ ಅಭಿಮಾನಿಗಳಿಗೆ ಇದ್ದೇ ಇದೆ. ಇದೀಗ ಯಶ್ ಕುರಿತಂತೆ ಹೊಸದೊಂದು ಅಪ್ಡೇಟ್ ಸಿಕ್ಕಿದೆ.

ಹೌದು, ದಸರಾ ಹಬ್ಬಕ್ಕೆ ಯಶ್ ಒಂದು ಹೊಸ ನ್ಯೂಸ್ ಕೊಡ್ತಾರೆ ಎನ್ನಲಾಗ್ತಾ ಇದೆ. ಯಶ್, ಕಾಲಿವುಡ್ ನಿರ್ದೇಶಕ ಶಂಕರ್ ಜೊತೆ ಸಿನಿಮಾ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಇದೊಂದು ದೊಡ್ಡ ಪ್ರಾಜೆಕ್ಟ್ ಅಂತೆ. ಸುಮಾರು 1000 ಕೋಟಿ ಬಜೆಟ್ ಎನ್ನಲಾಗುತ್ತಿದೆ. ವಿಭಿನ್ನ ಪಾತ್ರದ ಮೂಲಕ ಯಶ್ ಬರಲಿದ್ದಾರಂತೆ.

ಎಸ್. ವೆಂಕಟೇಶನ್ ಅವರು ಬರೆದಿರೋ ವೇಲ್‌ಪರಿ ಹಿಸ್ಟಾರಿಕಲ್ ಕಾದಂಬರಿಯ ಸಿನಿಮಾ ಎನ್ನಲಾಗಿದೆ. ಇದರಲ್ಲಿ ಯಶ್ ನಟಿಸೋದು ಪಕ್ಕಾ ಎನ್ನುತ್ತಿವೆ ಸಿನಿಮಾ ಮೂಲಗಳು. ಇನ್ನು ಯಶ್ ಮತ್ತು ಶಂಕರ್ ಜೊತೆಯ ಸಿನಿಮಾಗೆ ಕರಣ್ ಜೋಹರ್ ಬಂಡವಾಳ ಹೂಡಲಿದ್ದಾರೆ ಎನ್ನಲಾಗಿದೆ. ಈ ಸಿನಿಮಾ ಬಹುಭಾಷೆಗಳಲ್ಲಿ ಬರಲಿದೆಯಂತೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...