
ಸಂಸದೀಯ ವ್ಯವಹಾರಗಳ ಮಾಜಿ ಕಾರ್ಯದರ್ಶಿ ಹಾಗೂ ಬಿಜೆಪಿಯಿಂದ ಎರಡು ಬಾರಿ ಶಾಸಕರಾಗಿದ್ದ ಸುಖ್ಪಾಲ್ ಸಿಂಗ್, ಕೇಂದ್ರ ಸರ್ಕಾರದ ಕೃಷಿ ಸುಧಾರಣಾ ಕಾಯಿದೆಗಳ ವಿಚಾರವಾಗಿ ಅಸಮಾಧಾನಗೊಂಡು ಕೇಸರಿ ಪಡೆ ತೊರೆದಿದ್ದಾರೆ.
ಫಿರೋಜ಼್ಪುರ ನಗರದ ಪ್ರತಿನಿಧಿಯಾದ ಸುಖ್ಪಾಲ್, ಕಳೆದ ಸೆಪ್ಟೆಂಬರ್‌ನಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದ ಕೃಷಿ ಸುಧಾರಣೆ ಸಂಬಂಧ ಮೂರು ಕಾನೂನುಗಳ ವಿಚಾರದಲ್ಲಿ ಪ್ರತಿಭಟನೆ ಮಾಡುತ್ತಿರುವ ರೈತರ ಬೇಡಿಕೆಗಳನ್ನು ಆಲಿಸುತ್ತಿಲ್ಲ ಎಂದು ಆಪಾದಿಸಿದ್ದಾರೆ.
“ನನ್ನ ಮನೆಯ ಮೇಲೆ ಬಿಜೆಪಿ ಧ್ವಜ ಯಾವಾಗಲೂ ಹಾರಾಡುತ್ತಿತ್ತು. ಆದರೆ ಈಗ ಭಾರವಾದ ಹೃದಯದಿಂದ ಅದನ್ನು ತೆಗೆದುಹಾಕಿ, ಕಪ್ಪು ಧ್ವಜ ಹಾರಿಸಿ ರೈತರ ಸಮಸ್ಯೆಗಳನ್ನು ಬಗೆಹರಿಸದ ಕೇಂದ್ರ ಸರ್ಕಾರದ ವಿರುದ್ಧ ನನ್ನ ಸಿಟ್ಟು ತೋರಿಕೊಳ್ಳುತ್ತಿದ್ದೇನೆ” ಎಂದು ಮೂರು ಬಾರಿ ಶಾಸಕರಾಗಿದ್ದ ಗಿರ್ಧಾರಾ ಸಿಂಗ್‌ರ ಪುತ್ರ ತಿಳಿಸಿದ್ದಾರೆ.
ಕಂದಾಯ ಅಧಿಕಾರಿಗೆ ಹಿಗ್ಗಾಮುಗ್ಗಾ ನಿಂದಿಸಿದ ಕಾಂಗ್ರೆಸ್ ಶಾಸಕ..! ಆಡಿಯೋ ವೈರಲ್
“ವಾಸ್ತವದಲ್ಲಿ ರೈತರು ಹಾಗೂ ಅವರ ಹೋರಾಟಗಳ ಬಗ್ಗೆ ನಿಮಗೆ ಸರಿಯಾದ ಮಾಹಿತಿ ಬರುತ್ತಿದೆಯೇ ಎಂದು ಕೇಳಿ ಪ್ರಧಾನ ಮಂತ್ರಿಗೆ ಪತ್ರ ಬರೆಯುತ್ತೇನೆ. ರೈತರೊಂದಿಗೆ ಸಂಪರ್ಕದಲ್ಲಿರಲು ಪ್ರಧಾನಿ ನೆಲಮಟ್ಟದ ವರದಿಗಳನ್ನು ಗಮನಿಸಬೇಕು” ಎಂದು ಸಿಂಗ್ ತಿಳಿಸಿದ್ದಾರೆ.
2002 ಹಾಗೂ 2007ರ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಫಿರೋಜ಼್ಪುರದಿಂದ ಆಯ್ಕೆಯಾಗಿದ್ದ ಸುಖ್ಪಾಲ್, 2012 ಮತ್ತು 2017ರ ಚುನಾವಣೆಗಳಲ್ಲಿ ಕಾಂಗ್ರೆಸ್‌ನ ಪರ್ಮಿಂದರ್ ಸಿಂಗ್ ಸಿಕ್ರಿ ಎದುರು ಸೋಲು ಕಂಡಿದ್ದರು.