alex Certify ಕೂದಲುದುರುವ ಸಮಸ್ಯೆ ನಿವಾರಣೆಗೆ ಬೆಸ್ಟ್ ಈ ಯೋಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೂದಲುದುರುವ ಸಮಸ್ಯೆ ನಿವಾರಣೆಗೆ ಬೆಸ್ಟ್ ಈ ಯೋಗ

ಕೂದಲುದುರುವ ಸಮಸ್ಯೆ ಇದೀಗ ಎಲ್ಲರಲ್ಲೂ ಕಂಡುಬರುತ್ತದೆ. ಈ ಕೂದಲುದುರುವ ಸಮಸ್ಯೆಯನ್ನು ನಿವಾರಿಸಲು ಹಲವರು ಹಲವಾರು ರೀತಿಯ ಔಷಧಿಗಳನ್ನು, ಮನೆಮದ್ದುಗಳನ್ನು ಬಳಸುತ್ತಾರೆ. ಅಂದಹಾಗೇ ಕೆಲವು ಯೋಗಗಳನ್ನು ಮಾಡುವುದರ ಮೂಲಕ ಕೂಡ ಕೂದಲುದುರುವ ಸಮಸ್ಯೆಯನ್ನು ನಿವಾರಿಸಬಹುದು.

*ಸರ್ವಂಗಾಸನ : ಇದು ದೇಹದಲ್ಲಿರುವ ಗ್ರಂಥಿಗಳನ್ನು ಉತ್ತೇಜಿಸುತ್ತದೆ. ಇದು ಬೋಳಾದ ತಲೆಯಲ್ಲಿ ಕೂದಲು ಬೆಳೆಯಲು ಸಹಕಾರಿಯಾಗಿದೆ. ಈ ಯೋಗಾಸನದಲ್ಲಿ ತಲೆ ಕೆಳಮುಖವಾಗಿರುವುದರಿಂದ ನೆತ್ತಿಗೆ ರಕ್ತ ಸಂಚಾರವಾಗಿ ಕೂದಲು ಹುಟ್ಟಲು ಸಹಾಯ ಮಾಡುತ್ತದೆ.

*ಸಿರ್ಸಾಸನ : ಇದರಲ್ಲಿ ಕೂಡ ತಲೆ ಕೆಳಮುಖವಾಗಿರುವುದರಿಂದ ನೆತ್ತಿಗೆ ರಕ್ತದ ಹರಿವು ಸರಾಗವಾಗುತ್ತದೆ. ಇದು ಕೂದಲು ಹುಟ್ಟಲು ಸಹಾಯ ಮಾಡುತ್ತದೆ. ಈ ಯೋಗವು ಒತ್ತಡವನ್ನು ನಿವಾರಿಸಲು ಸಹಕಾರಿಯಾಗಿದೆ. ಹಾಗೇ ಕೂದಲುದುರುವುದನ್ನು ತಡೆಯಲು ಕೂಡ ಇದು ಪರಿಣಾಮಕಾರಿಯಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...