ಕೂದಲಿನ ರಕ್ಷಣೆ ಬಹಳ ಮುಖ್ಯ. ಉದ್ದನೆಯ ಹೊಟ್ಟಿಲ್ಲದ ಕೂದಲು ಪಡೆಯಲು ಏನೆಲ್ಲ ಕಸರತ್ತು ಮಾಡ್ತೇವೆ. ಆದ್ರೆ ಕೂದಲಿನ ರಕ್ಷಣೆ ಹೆಸರಲ್ಲಿ ಗೊತ್ತಿಲ್ಲದೆ ಕೆಲವೊಂದು ತಪ್ಪುಗಳನ್ನು ಮಾಡಿ ಬಿಡ್ತೇವೆ.
ಯಾವುದೇ ಕಾರಣಕ್ಕೂ ಕೂದಲಿಗೆ ಎಣ್ಣೆ ಹಚ್ಚಿ ರಾತ್ರಿ ಪೂರ್ತಿ ಬಿಡಬೇಡಿ. ಇದರಿಂದ ಕೂದಲು ಉದುರುವುದು ಜಾಸ್ತಿಯಾಗುವ ಜೊತೆಗೆ ಕೂದಲಿಗೆ ಧೂಳು ಅಂಟಿಕೊಳ್ಳುತ್ತದೆ. ಹಾಗಾಗಿ ತಲೆ ಸ್ನಾನ ಮಾಡುವ ಒಂದು ಗಂಟೆ ಮೊದಲು ಎಣ್ಣೆ ಮಸಾಜ್ ಮಾಡಿದ್ರೆ ಸಾಕು.
ಪ್ರತಿದಿನ ಶಾಂಪೂ ಬಳಸಬಾರದು. ಶಾಂಪೂವಿನಲ್ಲಿ ಕೆಮಿಕಲ್ ಇರುವುದರಿಂದ ಅದು ಕೂದಲನ್ನು ದುರ್ಬಲಗೊಳಿಸುತ್ತದೆ. ಕೂದಲು ಉದುರಲು ಕಾರಣವಾಗುತ್ತದೆ.
ಒದ್ದೆ ಕೂದಲನ್ನು ಟವೆಲ್ ನಿಂದ ಗಟ್ಟಿಯಾಗಿ ಉಜ್ಜಬಾರದು. ಹೀಗೆ ಉಜ್ಜಿದ್ರೆ ಕೂದಲು ಉದುರುತ್ತದೆ. ಮೊದಲು ಗಾಳಿಗೆ ಕೂದಲು ಒಣಗಲು ಬಿಡಿ. ನಂತ್ರ ಕೈನಿಂದ ಸಿಕ್ಕನ್ನು ಬಿಡಿಸಿ.
ಕೂದಲನ್ನು ಆಗಾಗ ಕತ್ತರಿಸುತ್ತಿರಬೇಕು. ಇಲ್ಲವಾದರೆ ಕೂದಲು ಕವಲೊಡೆಯಲು ಶುರುವಾಗುತ್ತದೆ. ಹಾಗಾಗಿ ಹುಡುಗರು ತಿಂಗಳಿಗೆ ಒಮ್ಮೆ, ಹುಡುಗಿಯರು ಎರಡು ತಿಂಗಳಿಗೊಮ್ಮೆ ಕೂದಲನ್ನು ಟ್ರಿಮ್ ಮಾಡಿಕೊಳ್ಳುವುದು ಒಳ್ಳೆಯದು.
ಕೂದಲು ಒದ್ದೆಯಾಗಿದ್ದಾಗ ಕೂದಲನ್ನು ಕಟ್ಟಬಾರದು. ಜಡೆ ಹೆಣೆದ್ರೆ ಕೂದಲು ಉದುರುವುದು ಜಾಸ್ತಿಯಾಗುವ ಜೊತೆಗೆ ಹೊಟ್ಟಿನ ಸಮಸ್ಯೆ ಕಾಣಿಸಿಕೊಳ್ಳುತ್ತದೆ.
ಕೂದಲನ್ನು ಸೆಟ್ ಮಾಡುವಾಗ ಸರಿಯಾದ ಉಷ್ಣತೆಯ ಅವಶ್ಯಕತೆ ಇರುತ್ತದೆ. ಒಂದು ವೇಳೆ ಉಷ್ಣತೆ ಪ್ರಮಾಣ ಹೆಚ್ಚು, ಕಡಿಮೆಯಾದಲ್ಲಿ ಕೂದಲು ಶಕ್ತಿ ಕಳೆದುಕೊಂಡು ಉದುರುತ್ತದೆ.