ಆಯುರ್ವೇದದಲ್ಲಿ ಆಹಾರ ಸೇವನೆಯ ಬಗ್ಗೆ ಸಾಕಷ್ಟು ಸಲಹೆಗಳಿವೆ. ಅದನ್ನು ಅನುಸರಿಸಿದ್ರೆ ನಮ್ಮ ದೇಹಕ್ಕೆ ಪ್ರಯೋಜನವೂ ಸಿಗಲಿದೆ. ಕೆಲವರಿಗೆ ಹಾಲು ಕುಡಿದ ನಂತರ ಹೊಟ್ಟೆಯಲ್ಲಿ ಗ್ಯಾಸ್ ಉತ್ಪತ್ತಿಯಾಗುವುದು ಸಾಮಾನ್ಯ. ಇನ್ನು ಕೆಲವರಿಗೆ ಹೊಟ್ಟೆನೋವು ಕೂಡ ಬಾಧಿಸಬಹುದು.
ಇದಕ್ಕೆ ಕಾರಣ ನೀವು ಹಾಲು ಕುಡಿಯುವ ವಿಧಾನದಲ್ಲಿ ಮಾಡುತ್ತಿರುವ ಪ್ರಮಾದ. ಆಯುರ್ವೇದದ ಪ್ರಕಾರ ಹಾಲನ್ನು ನಿಂತೇ ಕುಡಿಯಬೇಕು. ನೀರನ್ನು ಕುಳಿತುಕೊಂಡು ಕುಡಿಯಬೇಕು. ಇದಕ್ಕೂ ತನ್ನದೇ ಆದ ವೈಜ್ಞಾನಿಕ ಕಾರಣಗಳಿವೆ.
ಕುಳಿತಲ್ಲೇ ನೀರು ಕುಡಿಯುವುದರಿಂದ ಅಪಾಯಕಾರಿ ರಾಸಾಯನಿಕಗಳು ರಕ್ತದಲ್ಲಿ ಕರಗುವುದಿಲ್ಲ ಮತ್ತು ರಕ್ತವನ್ನು ಶುದ್ಧಗೊಳಿಸುತ್ತದೆ ಎನ್ನುತ್ತಾರೆ ಆರೋಗ್ಯ ತಜ್ಞರು. ನಾವು ಆಹಾರ ಸೇವಿಸಿದ ತಕ್ಷಣ ನೀರು ಕುಡಿಯಬಾರದು ಮತ್ತು ಒಂದೇ ಬಾರಿಗೆ ಹೆಚ್ಚು ನೀರು ಕುಡಿಯಬಾರದು. ಬದಲಾಗಿ ಸ್ವಲ್ಪ ಸ್ವಲ್ಪವೇ ನೀರು ಕುಡಿಯಬೇಕು. ಹಾಲು ಕುಡಿದ ನಂತರ ಕೆಲವರಿಗೆ ಜೀರ್ಣಕ್ರಿಯೆಗೆ ತುಂಬಾ ತೊಂದರೆಯಾಗುತ್ತದೆ. ಹೊಟ್ಟೆಯಲ್ಲಿ ಗ್ಯಾಸ್ ಸಮಸ್ಯೆ ಉದ್ಭವಿಸುತ್ತದೆ.
ಆರೋಗ್ಯ ತಜ್ಞರ ಪ್ರಕಾರ ನಾವು ಪ್ರತಿನಿತ್ಯ ಹಾಲನ್ನು ನಿಂತುಕೊಂಡು ಕುಡಿಯಬೇಕು. ಹಾಲನ್ನು ಯಾವಾಗಲೂ ಲಘುವಾಗಿ ಬಿಸಿ ಮಾಡಬೇಕು ಮತ್ತು ಆಹಾರವನ್ನು ಸೇವಿಸಿದ 2 ಗಂಟೆಗಳ ನಂತರ ಕುಡಿಯಬೇಕು. ಹೀಗೆ ಮಾಡುವುದರಿಂದ ಇದು ನಿಮ್ಮ ಮೊಣಕಾಲುಗಳನ್ನು ಸ್ಥಿರವಾಗಿರಿಸುತ್ತದೆ ಮತ್ತು ಇದು ಸ್ನಾಯುಗಳಿಗೆ ಹೆಚ್ಚು ಪ್ರಯೋಜನವನ್ನು ನೀಡುತ್ತದೆ. ಇದರಿಂದ ಹೃದಯದ ಆರೋಗ್ಯವು ಉತ್ತಮವಾಗಿರುತ್ತದೆ ಮತ್ತು ರಕ್ತದೊತ್ತಡವೂ ಸರಿಯಾಗಿರುತ್ತದೆ.