ದೇಹದ ಯಾವುದೋ ಒಂದು ಭಾಗದಲ್ಲಿ ಮೂಡುವ ಕುರು ಭಾರೀ ಮುಜುಗರ ಹುಟ್ಟು ಹಾಕುತ್ತದೆ. ಅದನ್ನು ವಾಸಿ ಮಾಡಲು ಸುಲಭ ಪರಿಹಾರ ಇಲ್ಲಿದೆ.
ಬೇವಿನ ಎಲೆಯ ರಸ ಮತ್ತು ಅರಿಶಿನ ಪುಡಿಯನ್ನು ಸೇರಿಸಿ ಪೇಸ್ಟ್ ತಯಾರಿಸಿ. ನಂತರ ಬಾಧಿತ ಭಾಗಕ್ಕೆ ಲೇಪಿಸಿ.
ಉದ್ದಿನ ಬೇಳೆಯನ್ನು ನೀರಿನಲ್ಲಿ ನೆನೆಸಿ ಚೆನ್ನಾಗಿ ಅರೆದು ನುಣ್ಣಗೆ ಮಾಡಿ ಕುರದ ಬಾಯನ್ನು ಬಿಟ್ಟು ಸುತ್ತ ಹಚ್ಚಿ. ಬೆಳಗ್ಗೆ ರಾತ್ರಿ ಪುನರಾವರ್ತಿಸಿ. ಮರುದಿನ ನಿಮ್ಮ ಕುರ ಬೆಳೆದು ಒಡೆದುಬಿಡುತ್ತದೆ. ನಂತರ ಎರಡು ದಿನದಲ್ಲಿ ಮಾಯವಾಗುತ್ತದೆ.
ದಿನಾ ಬೆಳಗ್ಗೆ ಖಾಲಿ ಹೊಟ್ಟೆಗೆ ತುಪ್ಪ ಮತ್ತು ಸಕ್ಕರೆಯನ್ನು ಸಮ ಪ್ರಮಾಣದಲ್ಲಿ ಬೆರೆಸಿ ತಿಂದರೂ ಕುರ ಕಡಿಮೆ ಆಗುತ್ತೆ. ಬಾಳೆ ದಿಂಡಿನ ಪಲ್ಯ ಸೇವನೆಯಿಂದ ಕುರ ಶಮನವಾಗುತ್ತದೆ.
ನೀರು ಕುದಿಯುವಾಗ ಅದಕ್ಕೆ ರಾಗಿಹಿಟ್ಟು, ಮೆಂತೆ ಕಾಳಿನ ಹಿಟ್ಟು ಮತ್ತು ಅರಿಶಿನ ಸೇರಿಸಿ ಕಲೆಸಿ ಗಟ್ಟಿಯಾದ ಕೂಡಲೇ ಅದನ್ನು ಬಟ್ಟೆಯ ಮೇಲೆ ಸವರಿ ಬಿಸಿಯಾಗಿರುವಾಗ ಕುರದ ಮೇಲೆ ಲೇಪಿಸಿ.