ವ್ಯಕ್ತಿಯೊಬ್ಬರು ತಾವು ಅತ್ಯಂತ ಪ್ರೀತಿಯಿಂದ ಸಾಕಿದ ಕುರಿಮರಿಯ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿರುವ ಅಪರೂಪದ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ.
ಹಿರಿಯೂರು ತಾಲೂಕಿನ ಟಿಬಿ ಗೊಲ್ಲರಹಟ್ಟಿಯ ಕೃಷ್ಣಮೂರ್ತಿ ಎಂಬವರು ತಮ್ಮ ಕುಟುಂಬ ಸದಸ್ಯರೊಂದಿಗೆ ಸೇರಿ ಬರೋಬ್ಬರಿ 5 ಕೆಜಿ ಕೇಕ್ ಕತ್ತರಿಸುವ ಮೂಲಕ ಕುರಿಮರಿಯ ಹುಟ್ಟುಹಬ್ಬ ಆಚರಿಸಿದ್ದಾರೆ.
ತಾಯಿ ಮೃತಪಟ್ಟಿರುವ ಹೆಣ್ಣು ಕುರಿಯನ್ನು ತಮ್ಮ ಕುಟುಂಬ ಸದಸ್ಯರಂತೆ ಕೃಷ್ಣಮೂರ್ತಿಯವರು ಪರಿಗಣಿಸಿದ್ದು, ಇದಕ್ಕೆ ಮೇವಿನ ಜೊತೆಯಲ್ಲಿ ಮನೆಯಲ್ಲಿ ಮಾಡುವ ಇಡ್ಲಿ-ದೋಸೆ ಸಹ ನೀಡುತ್ತಾರೆ. ಇದೀಗ ಅದರ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿದ್ದಾರೆ.