alex Certify ಕುಡಿಯುವ ನೀರಿಗಾಗಿ ಜೀವವನ್ನೇ ಪಣಕ್ಕಿಡ್ತಾರೆ ಈ ಊರಿನ ಜನ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕುಡಿಯುವ ನೀರಿಗಾಗಿ ಜೀವವನ್ನೇ ಪಣಕ್ಕಿಡ್ತಾರೆ ಈ ಊರಿನ ಜನ….!

ಜೀವಜಲ ನೀರು ಎಲ್ಲರಿಗೂ ಅತ್ಯಗತ್ಯ. ನೀರಿಲ್ಲದೆ ಬದುಕಲು ಸಾಧ್ಯವೇ ಇಲ್ಲ. ಆದರೆ ಇಲ್ಲೊಂದು ಊರಿನ ಜನ ಹನಿ ನೀರಿಗಾಗಿ ತಮ್ಮ ಜೀವವನ್ನೇ ಪಣಕ್ಕಿಡುತ್ತಾರೆ. ಇದೆಲ್ಲವನ್ನು ನೋಡಿದರೂ ಸಹ ಸರ್ಕಾರ ಕೈಕಟ್ಟಿ ಕುಳಿತಿದೆ.

ಇಂಥದೊಂದು ಘಟನೆ ಮಹಾರಾಷ್ಟ್ರದ ಮೇಲ್ಗಾಟ್ ನ ಖಡಿಯಾಲ್ ಗ್ರಾಮದಲ್ಲಿ ದಿನನಿತ್ಯ ನಡೆಯುತ್ತದೆ. ಊರಿನಲ್ಲಿರುವ ಎರಡು ತೆರೆದ ಬಾವಿಗಳು ಬತ್ತಿಹೋಗಿದ್ದು ದಿನನಿತ್ಯ ಮೂರು ಟ್ಯಾಂಕರಿನಲ್ಲಿ ಇಲ್ಲಿಗೆ ನೀರನ್ನು ಸರಬರಾಜು ಮಾಡಲಾಗುತ್ತದೆ.

ಟ್ಯಾಂಕರ್ಗಳು ನೀರನ್ನು ಬತ್ತಿದ ಬಾವಿಯೊಳಗೆ ಸುರಿದರೆ ಗ್ರಾಮಸ್ಥರು ದಡದಲ್ಲಿ ನಿಂತು ಹಗ್ಗಕ್ಕೆ ಬಕೆಟ್ ಕಟ್ಟಿ ನೀರು ಸಂಗ್ರಹಿಸುತ್ತಾರೆ. ಕುಂಚ ಯಾಮಾರಿದರೂ ಆಳದ ಬಾವಿಯೊಳಗೆ ಬೀಳುವುದು ಖಚಿತ.

1500 ಜನಸಂಖ್ಯೆ ಹೊಂದಿರುವ ಈ ಗ್ರಾಮದ ಜನತೆ ದಿನನಿತ್ಯ ಈ ಪಾಡನ್ನು ಅನುಭವಿಸುತ್ತಿದ್ದು, ಮಕ್ಕಳು ವೃದ್ಧರು ಸಹ ನೀರು ಸಂಗ್ರಹಿಸಲು ತಮ್ಮ ಜೀವವನ್ನು ಒತ್ತೆ ಇಡಬೇಕಾಗಿದೆ.

— ANI (@ANI) June 10, 2022

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...