
ಇಂಥದೊಂದು ಘಟನೆ ಮಹಾರಾಷ್ಟ್ರದ ಮೇಲ್ಗಾಟ್ ನ ಖಡಿಯಾಲ್ ಗ್ರಾಮದಲ್ಲಿ ದಿನನಿತ್ಯ ನಡೆಯುತ್ತದೆ. ಊರಿನಲ್ಲಿರುವ ಎರಡು ತೆರೆದ ಬಾವಿಗಳು ಬತ್ತಿಹೋಗಿದ್ದು ದಿನನಿತ್ಯ ಮೂರು ಟ್ಯಾಂಕರಿನಲ್ಲಿ ಇಲ್ಲಿಗೆ ನೀರನ್ನು ಸರಬರಾಜು ಮಾಡಲಾಗುತ್ತದೆ.
ಟ್ಯಾಂಕರ್ಗಳು ನೀರನ್ನು ಬತ್ತಿದ ಬಾವಿಯೊಳಗೆ ಸುರಿದರೆ ಗ್ರಾಮಸ್ಥರು ದಡದಲ್ಲಿ ನಿಂತು ಹಗ್ಗಕ್ಕೆ ಬಕೆಟ್ ಕಟ್ಟಿ ನೀರು ಸಂಗ್ರಹಿಸುತ್ತಾರೆ. ಕುಂಚ ಯಾಮಾರಿದರೂ ಆಳದ ಬಾವಿಯೊಳಗೆ ಬೀಳುವುದು ಖಚಿತ.
1500 ಜನಸಂಖ್ಯೆ ಹೊಂದಿರುವ ಈ ಗ್ರಾಮದ ಜನತೆ ದಿನನಿತ್ಯ ಈ ಪಾಡನ್ನು ಅನುಭವಿಸುತ್ತಿದ್ದು, ಮಕ್ಕಳು ವೃದ್ಧರು ಸಹ ನೀರು ಸಂಗ್ರಹಿಸಲು ತಮ್ಮ ಜೀವವನ್ನು ಒತ್ತೆ ಇಡಬೇಕಾಗಿದೆ.