ತನಗೆ ಕುಡಿಯಲು ಹಾಲು ನೀಡುವ ಮುನ್ನ ಮಕ್ಕಳಿಗೆ ನೀಡಿದಳು ಎಂಬ ಕಾರಣಕ್ಕೆ ಪತಿಯೊಬ್ಬ ತನ್ನ ಪತ್ನಿಗೆ ತ್ರಿವಳಿ ತಲಾಕ್ ನೀಡಿದ ಘಟನೆಯು ವರದಿಯಾಗಿದೆ. ಅಹಮದಾಬಾದ್ನ ಕರಂಜ್ನ ನಿವಾಸಿಯಾದ 31 ವರ್ಷದ ಮಹಿಳೆಯು ತನ್ನ ಪತಿಯ ಮನೆಯಲ್ಲಿ ನನಗೆ ವರದಕ್ಷಿಣೆಗಾಗಿ ಪೀಡಿಸುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ಮದುವೆಯಾದ ಮೇಲೆ ನನಗೆ ವರದಕ್ಷಿಣೆ ತರುವಂತೆ ಗಂಡನ ಮನೆಯವರು ಪೀಡಿಸುತ್ತಿದ್ದಾರೆ ಎಂದು ಆರೋಪಿಸಿ ಮಹಿಳೆಯು ಮಂಗಳವಾರದಂದು ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. 2008ರಲ್ಲಿ ಮದುವೆಯಾಗಿದ್ದ ಈ ಮಹಿಳೆಯು ನಾಡಿಯಾದ್ನಲ್ಲಿರುವ ತನ್ನ ಗಂಡನ ಮನೆಗೆ ಶಿಫ್ಟ್ ಆಗಿದ್ದರು.
ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಮಹಿಳೆಯ ಪತಿ ಹಾಗೂ ಆತನ ಪೋಷಕರು ನನ್ನ ತವರು ಮನೆಯಿಂದ ಈ ಕೂಡಲೇ 1 ಲಕ್ಷ ರೂಪಾಯಿಯನ್ನು ತರುವಂತೆ ಪೀಡಿಸಿದ್ದರು ಎಂದು ಮಹಿಳೆ ಆರೋಪಿಸಿದ್ದಾರೆ. ಇದೇ ಕಾರಣಕ್ಕಾಗಿ ಪತಿಯ ಮನೆಯವರಿಗೂ ಹಾಗೂ ನನಗೂ ವಾಗ್ವಾದ ಏರ್ಪಟ್ಟಿತ್ತು. ನನ್ನ ಮೇಲೆ ಪತಿಯ ಮನೆಯವರು ಹಲ್ಲೆ ನಡೆಸಿದ್ದಾರೆ ಎಂದು ಮಹಿಳೆಯು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ಗಲಾಟೆಯ ಬಳಿಕ ನನ್ನ ಐದು ವರ್ಷದ ಮಗಳು ನನಗೆ ಕುಡಿಯಲು ಹಾಲು ಹಾಗೂ ತಿನ್ನಲು ಸ್ನ್ಯಾಕ್ಸ್ ನೀಡುವಂತೆ ಕೇಳಿದ್ದಾರೆ. ಇದೇ ಸಮಯಕ್ಕೆ ಸರಿಯಾಗಿ ಪತಿ ತನಗೂ ಕುಡಿಯಲು ಹಾಲು ತರುವಂತೆ ಕೇಳಿದ್ದ. ನಾನು ಮೊದಲು ಮಗಳಿಗೆ ಹಾಲು ನೀಡಿದೆ. ಇಷ್ಟಕ್ಕೇ ಕೋಪಗೊಂಡ ಪತಿ ನನಗೆ ತಲಾಕ್ ನೀಡಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ.