alex Certify ಕುಡಿದ ಮತ್ತಿನಲ್ಲಿ‌ ರಸ್ತೆಯಲ್ಲೇ ಸಮವಸ್ತ್ರ ಬಿಚ್ಚಿದ ಪೊಲೀಸ್‌ ಪೇದೆ; ವಿಡಿಯೋ ವೈರಲ್‌ ಆಗುತ್ತಲೇ ಸಸ್ಪೆಂಡ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕುಡಿದ ಮತ್ತಿನಲ್ಲಿ‌ ರಸ್ತೆಯಲ್ಲೇ ಸಮವಸ್ತ್ರ ಬಿಚ್ಚಿದ ಪೊಲೀಸ್‌ ಪೇದೆ; ವಿಡಿಯೋ ವೈರಲ್‌ ಆಗುತ್ತಲೇ ಸಸ್ಪೆಂಡ್

ಮಧ್ಯಪ್ರದೇಶದ ಹರ್ದಾ ಜಿಲ್ಲೆಯಲ್ಲಿ ತಮ್ಮ ಸಮವಸ್ತ್ರವನ್ನು ತೆಗೆದು ರಸ್ತೆಯಲ್ಲಿದ್ದ ಸಾರ್ವಜನಿಕರ ಮೇಲೆ ಎಸೆದಿದ್ದ ಪೊಲೀಸ್ ಪೇದೆಯನ್ನ ಅಮಾನತು ಮಾಡಲಾಗಿದೆ. ಸಮವಸ್ತ್ರ ಕಳಚಿ ಎಸೆದಿದ್ದ ವಿಡಿಯೋ ಹೊರಬಂದ ನಂತರ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಶುಕ್ರವಾರ ಸಂಜೆ ನಡೆದ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಸುಶೀಲ್ ಮಾಂಡವಿ ಎಂದು ಗುರುತಿಸಲಾದ ಕಾನ್‌ಸ್ಟೇಬಲ್ ತಮ್ಮ ಸಮವಸ್ತ್ರ ಕಳಚಿ ಸಾರ್ವಜನಿಕರ ಮೇಲೆ ಎಸೆದಿದ್ದರು.

ಹರ್ದಾ ಪಟ್ಟಣದ ರಸ್ತೆಯೊಂದರಲ್ಲಿ ಪಾನಮತ್ತರಾಗಿದ್ದ ಪೊಲೀಸ್ ಪೇದೆ ಮತ್ತು ಶರ್ಟ್‌ ರಹಿತ ವ್ಯಕ್ತಿಯೊಬ್ಬರು ಪರಸ್ಪರ ಜಗಳವಾಡುತ್ತಿದ್ದರು.

ವಾದದ ಸಮಯದಲ್ಲಿ, ಕಾನ್‌ಸ್ಟೇಬಲ್ ರಸ್ತೆಯ ಮೇಲೆ ಮೊಣಕಾಲುಗಳ ಮೇಲೆ ಕುಳಿತು ತನ್ನ ಸಮವಸ್ತ್ರವನ್ನು ತೆಗೆದುಹಾಕಿದ್ದರು.

ಆರಂಭದಲ್ಲಿ ಕಾನ್ ಸ್ಟೇಬಲ್ ತನ್ನ ಅಂಗಿಯನ್ನು ತೆಗೆದು ಸಾರ್ವಜನಿಕರ ಕಡೆಗೆ ಎಸೆದಿದ್ರು. ನಂತರ ತನ್ನ ಪ್ಯಾಂಟ್‌ ಸಹ ತೆಗೆದು ವ್ಯಕ್ತಿಯೊಂದಿಗೆ ವಾದವನ್ನು ಮುಂದುವರಿಸಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...