alex Certify ಕುಡಿದ ಅಮಲಿನಲ್ಲಿ ಮದುವೆ ಮಂಟಪದಲ್ಲೇ ವರ ಮಾಡಿದ ಕೆಲಸ ಕಂಡು ಹೌಹಾರಿದ ಅತಿಥಿಗಳು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕುಡಿದ ಅಮಲಿನಲ್ಲಿ ಮದುವೆ ಮಂಟಪದಲ್ಲೇ ವರ ಮಾಡಿದ ಕೆಲಸ ಕಂಡು ಹೌಹಾರಿದ ಅತಿಥಿಗಳು…!

ಮದುವೆ ಸಂದರ್ಭದಲ್ಲಿ ಅಲ್ಲಿ ನಗು, ತಮಾಷೆ, ಸಂಭ್ರಮ ಮನೆ ಮಾಡಿರುತ್ತದೆ. ಆದರೆ ಕೆಲವೊಂದು ಮದುವೆಗಳಲ್ಲಿ ದುರಂತವೂ ಸಂಭವಿಸಿದ್ದು, ಎರಡು ದಿನಗಳ ಹಿಂದಷ್ಟೇ ಮದುವೆ ಸಂಭ್ರಮದಲ್ಲಿದ್ದ ವರ ಹಾರಿಸಿದ ಗುಂಡಿಗೆ ಆತನ ಸ್ನೇಹಿತನೇ ಬಲಿಯಾಗಿದ್ದ ಘಟನೆ ನಡೆದಿತ್ತು.

ಇದೀಗ ಮತ್ತೊಂದು ಘಟನೆ ಬೆಳಕಿಗೆ ಬಂದಿದ್ದು, ನಿಲ್ಲಲಾಗದಷ್ಟು ಕಂಠಪೂರ್ತಿ ಕುಡಿದಿದ್ದ ವರ, ಮದುವೆ ಮಂಟಪದಲ್ಲಿ ವಧುವಿಗೆ ಹಾರ ಹಾಕುವ ಬದಲು ಆಕೆಯ ಸಹೋದರಿಗೆ ಹಾರ ಹಾಕಿ ಒದೆ ತಿಂದಿದ್ದಾನೆ. ಇಂಥದೊಂದು ಘಟನೆ ಮದ್ಯ ನಿಷೇಧವಿರುವ ಬಿಹಾರದಲ್ಲಿ ನಡೆದಿರುವುದು ವಿಶೇಷ.

ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತೂರಾಡುತ್ತಿದ್ದ ವರನನ್ನು ಒಬ್ಬ ಬೀಳದಂತೆ ಹಿಡಿದಿದ್ದಾನೆ. ವಧು ಆತನ ಪರಿಸ್ಥಿತಿಯನ್ನು ಆತಂಕದಿಂದಲೇ ಗಮನಿಸುತ್ತಿದ್ದ ವೇಳೆ ಎಲ್ಲರೂ ಹಾರ ಹಾಕುವಂತೆ ಹೇಳುತ್ತಾರೆ.

ಆದರೆ ಹಾರ ಯಾರಿಗೆ ಹಾಕಬೇಕು ಎಂಬಷ್ಟು ಅರಿವಿರದ ಆತ ವಧುವಿನ ಪಕ್ಕದಲ್ಲಿದ್ದ ಆಕೆಯ ಸಹೋದರಿಗೆ ಹಾರ ಹಾಕಿದ್ದಾನೆ. ಇದರಿಂದ ರೊಚ್ಚಿಗೆದ್ದ ಆಕೆ ವೇದಿಕೆ ಮೇಲೆಯೇ ಕಪಾಳಕ್ಕೆ ಬಾರಿಸಿದ್ದಾಳೆ. ಅಲ್ಲದೇ ತನಗೆ ಹಾಕಿರುವ ಹಾರವನ್ನು ತೆಗೆಯುವಂತೆ ತಾಕೀತು ಮಾಡಿದ್ದಾಳೆ. ಕಷ್ಟಪಟ್ಟು ಆಕೆಯ ಕುತ್ತಿಗೆಯಿಂದ ಹಾರ ತೆಗೆದ ವರ ವಧುವಿಗೆ ಹಾಕಿದನೋ ಇಲ್ಲವೋ ಎಂಬುದು ತಿಳಿದುಬಂದಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...