alex Certify ಕುಡಿದ ಅಮಲಿನಲ್ಲಿ ಬೀಡಿ ಹಚ್ಚಿಕೊಳ್ಳಲು ಹೋಗಿ ಪ್ರಾಣವನ್ನೇ ಕಳೆದುಕೊಂಡ ವೃದ್ದ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕುಡಿದ ಅಮಲಿನಲ್ಲಿ ಬೀಡಿ ಹಚ್ಚಿಕೊಳ್ಳಲು ಹೋಗಿ ಪ್ರಾಣವನ್ನೇ ಕಳೆದುಕೊಂಡ ವೃದ್ದ….!

ಕುಡಿದ ಅಮಲಿನಲ್ಲಿ ಬೀಡಿ ಹಚ್ಚಿಕೊಳ್ಳಲು ಹೋದ ವೃದ್ಧನೊಬ್ಬ ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಚಾಮನಹಳ್ಳಿಯಲ್ಲಿ ನಡೆದಿದೆ.

ಚಾಮನಹಳ್ಳಿಯ 65 ವರ್ಷದ ಕೃಷ್ಣಯ್ಯ ಮೃತಪಟ್ಟ ವೃದ್ಧನಾಗಿದ್ದು, ಈತ ಭಾನುವಾರದಂದು ವಿಪರೀತ ಮದ್ಯ ಸೇವಿಸಿದ್ದು, ಬೀಡಿ ಹಚ್ಚಿಕೊಂಡು ಹಾಗೆಯೇ ಹಾಸಿಗೆ ಮೇಲೆ ಮಲಗಿದ್ದಾನೆ.

ಬೀಡಿಯ ಬೆಂಕಿ ಕಿಡಿ ಮೈಮೇಲೆ ಬಿದ್ದು ಬಳಿಕ ಹಾಸಿಗೆಗೆ ವ್ಯಾಪಿಸಿ ಬೆಂಕಿ ಹೊತ್ತಿಕೊಂಡಿದೆ. ಇದರ ಪರಿಣಾಮ ವೃದ್ಧನ ಎದೆ, ಕೈಗಳಿಗೆ ಸುಟ್ಟ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗಿದೆ ಸಾವನ್ನಪ್ಪಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...