ಕೆಲವರಿಗೆ ಕಂಠಪೂರ್ತಿ ಕುಡಿದು ತಾವೇನು ಮಾಡುತ್ತಿದ್ದೇವೆ ಅನ್ನೋ ಪರಿಜ್ಞಾನ ಕೂಡ ಇರುವುದಿಲ್ಲ. ಇದೇ ರೀತಿ ಇಲ್ಲೊಬ್ಬ ವ್ಯಕ್ತಿ ಕುಡಿದು ಅವಾಂತರವನ್ನೇ ಸೃಷ್ಟಿಸಿದ್ದಾನೆ
ಯುಕೆಯ ಪೂಲ್ ಟೌನ್‌ನಲ್ಲಿರುವ ವ್ಯಕ್ತಿಯೊಬ್ಬ ತಡರಾತ್ರಿ ಮದ್ಯಪಾನ ಮಾಡಿ ಅಸಾಮಾನ್ಯ ಸವಾರಿ ಮಾಡಿದ್ದಾನೆ. ಮನೆಗೆ ತಲುಪುವುದಕ್ಕಾಗಿ ಆತ ಡಬಲ್ ಡೆಕ್ಕರ್ ಬಸ್ ಅನ್ನೇ ಕದ್ದಿದ್ದಾನೆ. ರೇಲಿಂಗ್‌ಗಳಿಗೆ ಡಿಕ್ಕಿ ಹೊಡೆಯುತ್ತಾ, ಸುಮಾರು ಮೂರು ಮೈಲುಗಳಷ್ಟು ದೂರ ಬಸ್ ಅನ್ನು ಚಲಾಯಿಸಿ ತನ್ನ ಮನೆ ತಲುಪಿದ್ದಾನೆ.
52 ವರ್ಷದ ಸ್ಟೀಫನ್ ಮೆಕಾರ್ಟನ್ ಎಂಬಾತ ತನ್ನ ಸ್ನೇಹಿತನೊಂದಿಗೆ ಹೊರಗೆ ಹೋಗಿದ್ದ. ಕಂಠಪೂರ್ತಿ ಕುಡಿದಿದ್ದ ಈತ, ಸ್ಥಳದಿಂದ ಮೂರು ಮೈಲುಗಳಷ್ಟು ದೂರದಲ್ಲಿರುವ ಮನೆಗೆ ಹಿಂತಿರುಗಲು ಡಬಲ್ ಡೆಕ್ಕರ್ ಬಸ್ ಅನ್ನು ಕದ್ದಿದ್ದಾನೆ.
ಕುಡಿದು ಈ ರೀತಿ ಅವಾಂತರ ಸೃಷ್ಟಿಸಿದ್ದರಿಂದ, ಮರುದಿನ ಬೆಳಗ್ಗೆ ಎಚ್ಚರವಾದಾಗ ತಾನು ರಾತ್ರಿ ಏನು ಮಾಡಿದೆ ಎಂಬುದೇ ಮರೆತುಬಿಟ್ಟಿದ್ದಾರೆ. ಮೆಕಾರ್ಟನ್‌ನ ಅಪರಾಧವು ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಘಟನೆ ಬಗ್ಗೆ ಆತನಿಗೆ ನೆನಪಿಲ್ಲವಾದ್ರೂ, ಸಿಸಿ ಟಿವಿ ದೃಶ್ಯದಲ್ಲಿರುವುದು ತಾನು ಎಂದು ಒಪ್ಪಿಕೊಂಡಿದ್ದಾನೆ.