alex Certify ಕುಂದಾನಗರಿಗೆ ಬಂದ ಕ್ರಿಕೆಟ್ ದೇವರು ಸಾಮಾನ್ಯರಂತೆ ಟೀ ಸವಿದ ಸಚಿನ್..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕುಂದಾನಗರಿಗೆ ಬಂದ ಕ್ರಿಕೆಟ್ ದೇವರು ಸಾಮಾನ್ಯರಂತೆ ಟೀ ಸವಿದ ಸಚಿನ್..!

ಬೆಳಗಾವಿ- ಕ್ರಿಕೆಟ್​ನ ದೇವರು ಎಂದೇ ಪ್ರಸಿದ್ಧರಾಗಿರುವ ಸಚಿನ್‌ ತೆಂಡೂಲ್ಕರ್‌ ಇಂದು ಬೆಳಗಾವಿಯಲ್ಲಿ ಕಾಣಿಸಿಕೊಂಡಿದ್ದಾರೆ. ಸಾಮಾನ್ಯರಲ್ಲಿ ಸಾಮಾನ್ಯರಂತೆ ರಸ್ತೆ ಪಕ್ಕದ ಗೂಡಂಗಡಿಯೊಂದರಲ್ಲಿ ಟೀ ಕುಡಿದಿದ್ದಾರೆ. ನಿಜಕ್ಕೂ ಅವರ ಸರಳತೆಗೆ ಅಲ್ಲಿದ್ದ ಜನ ಆಶ್ಚರ್ಯ ಚಕಿತರಾಗಿದ್ದಾರೆ. ಇನ್ನು ಟೀ ಕುಡಿದು ಬಳಿಕ ಸೆಲ್ಪಿ ವಿಡಿಯೋ ಕ್ಲಿಕ್ಕಿಸಿಕೊಂಡಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಹೌದು, ಸಚಿನ್‌ ತೆಂಡೂಲ್ಕರ್‌ ಮುಂಬೈಯಿಂದ ಬೆಳಗಾವಿ ಮಾರ್ಗವಾಗಿ ಗೋವಾಗೆ ತೆರಳುತ್ತಿದ್ದರು ಎನ್ನಲಾಗಿದೆ. ಗೋವಾಗೆ ಹೋಗುವ ಮಧ್ಯೆ ಟೀ ಸವಿಯಲು ಮುಂದಾಗಿದ್ದಾರೆ. ಬೆಳಗಾವಿ ಹೊರ ವಲಯದ ಮಚ್ಚೆ ಬಳಿಯ ರಾಷ್ಟ್ರೀಯ ಹೆದ್ದಾರಿ 4 ಪಕ್ಕದಲ್ಲಿರುವ ವೈಜು ನಿತೂರ್ಕರ್ ಎಂಬುವರ ಫೌಜಿ ಟೀ ಸ್ಟಾಲ್​ನಲ್ಲಿ ಟೀ ಕುಡಿದಿದ್ದಾರೆ.

ಗೋವಾಕ್ಕೆ ಕುಟುಂಬ ಸಮೇತ ತೆರಳಿದ್ದಾರೆ ಎಂದು ಹೇಳಲಾಗುತ್ತಿದೆ. ಅದೇನೆ ಇದ್ದರೂ ಸಾಮಾನ್ಯರಂತೆ ಬಂದು ಒಂದು ಗೂಂಡಂಗಡಿಯಲ್ಲಿ ಟೀ ಕುಡಿದಿರೋದು ವಿಶೇಷ. ಜೊತೆಗೆ ಅಲ್ಲಿದ್ದವರ ಜೊತೆ ಫೋಟೋ ತೆಗೆದುಕೊಂಡಿದ್ದು ಇನ್ನೂ ವಿಶೇಷ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...