ಕೀವ್: ಉಕ್ರೇನ್ ಮೇಲಿನ ಸಮರ ಮುಂದುವರೆಸಿರುವ ರಷ್ಯಾ ಸೇನೆ ಇದೀಗ ರಾಜಧಾನಿ ಕೀವ್ ಸೇರಿದಂತೆ ನಾಲ್ಕು ನಗರಗಳಲ್ಲಿ ತಾತ್ಕಾಲಿಕ ಕದನ ವಿರಾಮ ಘೋಷಿಸಿದೆ.
ಕೀವ್, ಕಾರ್ಖೀವ್, ಮರಿಯಪೋಲ್ ಹಾಗೂ ಸುಮಿ ನಗರಗಳಲ್ಲಿ ರಷ್ಯಾ ತಾತ್ಕಾಲಿಕ ಕದನ ವಿರಾಮ ಘೋಷಿಸಿದೆ. ವಿದೇಶಿ ನಾಗರಿಕರು ಹಾಗೂ ಯುದ್ಧ ಪ್ರದೇಶಗಳ ನಾಗರಿಕರ ಸುರಕ್ಷಿತ ಸ್ಥಳಾಂತರ ನಿಟ್ಟಿನಲ್ಲಿ ತಾತ್ಕಾಲಿಕ ಕದನ ವಿರಾಮ ಘೋಷಿಸಲಾಗಿದೆ.
ಇಲ್ಲಿದೆ ರುಚಿಕರವಾದ ‘ಬೂಂದಿ’ ಲಾಡು ಮಾಡುವ ವಿಧಾನ
ಉಕ್ರೇನ್ ನ ಈ ನಾಲ್ಕು ನಗರ ಹೊರತುಪಡಿಸಿ ಉಳಿದೆಡೆಗಳಲ್ಲಿ ರಷ್ಯಾ ಭೀಕರ ಕ್ಷಿಪಣಿ ದಾಳಿ, ಬಾಂಬ್ ದಾಳಿಗಳನ್ನು ಮುಂದುವರೆಸಿದ್ದು, ಹಳ್ಳಿ ಹಳ್ಳಿಗಳಲ್ಲಿಯೂ ಕ್ಷಿಪಣಿ ದಾಳಿ ನಡೆಸಿದೆ. ಒಡೆಸ್ಸಾದ ತುಝ್ಲಾ ಗ್ರಾಮದ ಮೇಲೆ ರಷ್ಯಾ ಸೇನೆ ಕ್ಷಿಪಣಿ ದಾಳಿ ನಡೆಸಿದ್ದು, ಮನೆ ಮನೆಗಳು ಬೆಂಕಿಗಾಹುತಿಯಾಗಿವೆ. ಗ್ರಾಮದ ಜನರು ದಿಕ್ಕಾಪಾಲಾಗಿ ಓಡಿದ್ದಾರೆ.