alex Certify ಕೀಟಲೆ ಮಾಡಿದವನ ಬೆರಳನ್ನು ಕಚ್ಚಿ ಹಿಡಿದೆಳೆದ ಸಿಂಹ: ಭಯಾನಕ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೀಟಲೆ ಮಾಡಿದವನ ಬೆರಳನ್ನು ಕಚ್ಚಿ ಹಿಡಿದೆಳೆದ ಸಿಂಹ: ಭಯಾನಕ ವಿಡಿಯೋ ವೈರಲ್

ಪ್ರಾಣಿ ಸಂಗ್ರಾಹಲಯಗಳಲ್ಲಿ ಕೆಲವರು ಪ್ರಾಣಿಗಳನ್ನು ಕುಚೇಷ್ಟೆ ಮಾಡುತ್ತಾರೆ. ಈ ರೀತಿ ಮಾಡಬಾರದೆಂಬ ಸೂಚನೆ ಇದ್ದರೂ ಕೂಡ ಕೆಲವರು ಅದನ್ನು ಪಾಲಿಸುವುದಿಲ್ಲ. ಕೆಲವೊಮ್ಮೆ ಕೀಟಲೆ ಮಾಡಲು ಹೋಗಿ ತಮ್ಮ ಪ್ರಾಣಕ್ಕೆ ಸಂಚಕಾರ ಬರಬಹುದು. ಇದೀಗ ಸಿಂಹಕ್ಕೆ ಕೀಟಲೆ ಮಾಡಲು ಹೋದ ವ್ಯಕ್ತಿಯೊಬ್ಬನ ವಿಡಿಯೋ ವೈರಲ್ ಆಗಿದೆ.

ಝೂನೊಳಗೆ ಇದ್ದ ಸಿಂಹವನ್ನು ಮೃಗಾಲಯದ ಕೆಲಸಗಾರನೊಬ್ಬ ಕೆಣಕಿದ್ದಾನೆ. ಈ ವೇಳೆ ಸಿಂಹ ಆತನ ಬೆರಳನ್ನು ಕಚ್ಚಿದ ಭಯಾನಕ ಕ್ಷಣದ ವಿಡಿಯೋ ಅಂತರ್ಜಾಲದಲ್ಲಿ ಹರಿದಾಡುತ್ತಿದೆ. ಶುಕ್ರವಾರ ಸೇಂಟ್ ಎಲಿಜಬೆತ್‌ನಲ್ಲಿರುವ ಜಮೈಕಾ ಮೃಗಾಲಯದಲ್ಲಿ ವ್ಯಕ್ತಿಯೊಬ್ಬ ಸಿಂಹದ ಪಂಜರಕ್ಕೆ ಕೈ ಹಾಕಿದಾಗ ಈ ಘಟನೆ ನಡೆದಿದೆ.

ವ್ಯಕ್ತಿಯು ನಿರಂತರವಾಗಿ ಸಿಂಹವನ್ನು ಚುಡಾಯಿಸಿದ್ದಾನೆ. ಇದರಿಂದ ಕೋಪಗೊಂಡ ಸಿಂಹವು ತನ್ನ ಹಲ್ಲುಗಳನ್ನು ತೋರಿಸುತ್ತಾ, ಘರ್ಜಿಸುವ ಮೂಲಕ ಸಿಟ್ಟನ್ನು ತೋರಿಸಿದೆ. ಅದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಆತ ತನ್ನ ಕೈಬೆರಳುಗಳನ್ನು ಪಂಜರಕ್ಕೆ ಮತ್ತೆ ಮತ್ತೆ ಇಡುತ್ತಾ ಕೀಟಲೆ ಮಾಡಿದ್ದಾನೆ. ಕೋಪಗೊಂಡ ಸಿಂಹವು ಆತನ ಬೆರಳನ್ನು ಕಚ್ಚಿ ಹಿಡಿದೆಳೆದಿದೆ. ವ್ಯಕ್ತಿಯ ಬೆರಳು ಸಿಂಹದ ಬಾಯಿಯಲ್ಲಿ ಸಿಲುಕಿಕೊಂಡಿದೆ. ಆತ ತನ್ನ ಕೈಯನ್ನು ಎಷ್ಟೇ ಹಿಂದಕ್ಕೆ ಎಳೆಯಲು ಪ್ರಯತ್ನಪಟ್ಟರೂ ಸಾಧ್ಯವಾಗಲಿಲ್ಲ. ಸಿಂಹ ಗಟ್ಟಿಯಾಗಿ ಆತನ ಬೆರಳನ್ನು ಕಚ್ಚಿ ಹಿಡಿದಿದೆ.

ಪ್ರತ್ಯಕ್ಷದರ್ಶಿಯೊಬ್ಬರು ಹೇಳುವ ಪ್ರಕಾರ, ಘಟನೆ ನಡೆದಾಗ ಇದೊಂದು ತಮಾಷೆ ಅಂತಾ ಭಾವಿಸಿದೆವು. ಇದು ಗಂಭೀರವಾಗಿದೆ ಎಂದು ಭಾವಿಸಲಿಲ್ಲ. ಆತ ನೆಲದ ಮೇಲೆ ಬಿದ್ದಾಗಲೇ ಅಲ್ಲಿದ್ದವರಿಗೆ ಎಷ್ಟು ಗಂಭೀರವಾಗಿದೆ ಎಂದು ತಿಳಿದಿದ್ದು ಎಂದು ತಿಳಿಸಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ಸಿಂಹಕ್ಕೆ ಅಡ್ಡಿಪಡಿಸಿದ್ದಕ್ಕಾಗಿ ಹಲವರು ಆ ವ್ಯಕ್ತಿಗೆ ಛೀಮಾರಿ ಹಾಕಿದ್ದಾರೆ.

— Ms blunt from shi born 🇯🇲 “PRJEFE” (@OneciaG) May 21, 2022

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...