alex Certify ಕಿವಿನೋವಿಗೆ ರಾಮಬಾಣ ಮನೆಯಲ್ಲೇ ಇರುವ ಈ ವಸ್ತು, ಇತರ ಅನೇಕ ಸಮಸ್ಯೆಗಳಿಗೂ ನೀಡುತ್ತೆ ಪರಿಹಾರ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಿವಿನೋವಿಗೆ ರಾಮಬಾಣ ಮನೆಯಲ್ಲೇ ಇರುವ ಈ ವಸ್ತು, ಇತರ ಅನೇಕ ಸಮಸ್ಯೆಗಳಿಗೂ ನೀಡುತ್ತೆ ಪರಿಹಾರ….!

ಕಿವಿ ನೋವು ಬಹುತೇಕ ಎಲ್ಲರನ್ನೂ ಕಾಡುವ ಸಮಸ್ಯೆ. ಕೆಲವೊಮ್ಮೆ ಅಸಹನೀಯವಾದ ನೋವಿನಿಂದ ನಾವು ಕಂಗೆಡುತ್ತೇವೆ. ಕಿವಿ ನೋವು ಶುರುವಾದ್ರೆ ಮಲಗುವುದು ಕೂಡ ಅಸಾಧ್ಯ. ಕೆಲವೊಮ್ಮೆ ಔಷಧದಿಂದಲೂ ಕಿವಿನೋವಿಗೆ ಪರಿಹಾರ ಸಿಗುವುದಿಲ್ಲ. ಆದರೆ ಆಯುರ್ವೇದಿಕ್‌ ಮನೆಮದ್ದಿನಲ್ಲಿ ಕಿವಿನೋವು ನಿವಾರಣೆಯಾಗುತ್ತದೆ. ನಮ್ಮ ಮನೆಯಲ್ಲೇ ಇರುವ ವಸ್ತುವೊಂದು ಕಿವಿನೋವನ್ನು ಸುಲಭವಾಗಿ ಗುಣಪಡಿಸುತ್ತದೆ. ಅದೇ ಸಾಸಿವೆ ಎಣ್ಣೆ. ಸಾಸಿವೆ ಎಣ್ಣೆಯು ಕಿವಿ ನೋವಿನ ಸಮಸ್ಯೆಯನ್ನು ಮಾತ್ರವಲ್ಲದೆ ದೇಹದ ಸಮಸ್ಯೆಗಳನ್ನು ಗುಣಪಡಿಸುವ ಸಾಮರ್ಥ್ಯ ಹೊಂದಿದೆ.

ನಿಮಗೆ ಕಿವಿ ನೋವು ಅಥವಾ ಸೋಂಕು ಇದ್ದರೆ, ಚೆನ್ನಾಗಿ ಕಿವಿ ಕೇಳದಿದ್ದರೆ ಸ್ನಾನ ಮಾಡುವ ಮೊದಲು ಕಿವಿಗೆ ಸಾಸಿವೆ ಎಣ್ಣೆಯನ್ನು ಪ್ರತಿದಿನ ಹಾಕಿ. ಇದರಿಂದ ಶ್ರವಣ ಶಕ್ತಿಯೂ ಹೆಚ್ಚುತ್ತದೆ. ಕಿವಿಯಲ್ಲಿನ ಸೋಂಕು ಮತ್ತು ನೋವು ಕಡಿಮೆಯಾಗುತ್ತದೆ.  ಸಾಸಿವೆ ಎಣ್ಣೆಯ ಇತರ ಅನೇಕ ಪ್ರಯೋಜನಗಳನ್ನು ಆಯುರ್ವೇದದಲ್ಲಿ ಉಲ್ಲೇಖಿಸಲಾಗಿದೆ. ಯಾರಾದರೂ ಪಾರ್ಶ್ವವಾಯುವಿಗೆ ಒಳಗಾಗಿದ್ದರೆ, ಸಾಸಿವೆ ಪೇಸ್ಟ್ ತುಂಬಾ ಪ್ರಯೋಜನಕಾರಿಯಾಗಿದೆ. ಇದಕ್ಕಾಗಿ ಎರಡು ಭಾಗ ಸಾಸಿವೆ ಮತ್ತು ಒಂದು ಭಾಗ ಒಣ ಶುಂಠಿಯನ್ನು ಬೆರೆಸಿ ನುಣ್ಣಗೆ ರುಬ್ಬಿ ಬಾಧಿತ ಜಾಗಕ್ಕೆ ಮಸಾಜ್ ಮಾಡಿ.

ಇದರಿಂದ ರೋಗಿಗೆ ಸಾಕಷ್ಟು ಅನುಕೂಲವಾಗುತ್ತದೆ. ಮೈಕೈ ನೋವಿನಿಂದ ಬಳಲುತ್ತಿರುವವರು ಸಾಸಿವೆ, ವಿನೋಲಾ, ಒಣ ಶುಂಠಿ ಮತ್ತು ಓಮವನ್ನು ಕಲ್ಲು ಉಪ್ಪಿನೊಂದಿಗೆ ಬಿಸಿ ಮಾಡಿ. ನೋವಿರುವ ಸ್ಥಳದಲ್ಲಿ ಅದರಿಂದ ಶಾಖ ಕೊಟ್ಟುಕೊಂಡರೆ ಕೆಲವೇ ದಿನಗಳಲ್ಲಿ ನೋವು ನಿವಾರಣೆಯಾಗುತ್ತದೆ. ಆನೆಕಾಲು ರೋಗಕ್ಕೂ ಸಾಸಿವೆ ಎಣ್ಣೆಯಲ್ಲಿ ಚಿಕಿತ್ಸೆಯಿದೆ. ಸಾಸಿವೆ ಎಣ್ಣೆಯಲ್ಲಿ ಗೋಮೂತ್ರವನ್ನು ಬೆರೆಸಿ ಮಸಾಜ್ ಮಾಡಬೇಕು. ಇದರಿಂದ ಆನೆಕಾಲು ಬಾಧೆ ಕಡಿಮೆಯಾಗುತ್ತದೆ.  ಮೂಳೆ ನೋವಿಗೂ ಸಾಸಿವೆ ಎಣ್ಣೆಯಿಂದ ಪರಿಹಾರ ಸಿಗುತ್ತದೆ. ಸಾಸಿವೆ ಕಾಳು ಮತ್ತು ಎಣ್ಣೆ ಮಕ್ಕಳಿಗೆ ತುಂಬಾ ಪ್ರಯೋಜನಕಾರಿ. ಚಿಕ್ಕ ಮಕ್ಕಳಿಗೆ ಸಾಸಿವೆ ಎಣ್ಣೆಯಲ್ಲಿ ಕೇಸರಿ ಮತ್ತು ಕರ್ಪೂರ ಬೆರೆಸಿ ಮಸಾಜ್ ಮಾಡಿ. ಇದರಿಂದ ಅವರ ಮೂಳೆಗಳು ಬಲಗೊಳ್ಳುತ್ತವೆ ಮತ್ತು ನೋವು ಕೂಡ ದೂರವಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...