alex Certify ಕಿವಿಗಳನ್ನು ಈ ರೀತಿ ಸ್ವಚ್ಛಗೊಳಿಸುವುದು ಅಪಾಯಕಾರಿ; ವ್ಯಾಕ್ಸ್‌ ತೆಗೆಯುವ ಭರದಲ್ಲಿ ಕಿವುಡರಾಗಬಹುದು ! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಿವಿಗಳನ್ನು ಈ ರೀತಿ ಸ್ವಚ್ಛಗೊಳಿಸುವುದು ಅಪಾಯಕಾರಿ; ವ್ಯಾಕ್ಸ್‌ ತೆಗೆಯುವ ಭರದಲ್ಲಿ ಕಿವುಡರಾಗಬಹುದು !

ಕಿವಿಯಲ್ಲಿ ಅನೇಕ ಬಾರಿ ಕೊಳೆ ಸೇರಿಕೊಳ್ಳುವುದರಿಂದ ಶ್ರವಣ ಸಮಸ್ಯೆಗಳು ಬರಲಾರಂಭಿಸುತ್ತವೆ. ಕಿವಿ ಸರಿಯಾಗಿ ಕೇಳಿಸದೇ ಇರುವುದು, ಇದ್ದಕ್ಕಿದ್ದಂತೆ ಕಿವಿಯಲ್ಲಿ ನೋವು ಹೀಗೆ ಅನೇಕ ರೀತಿಯ ತೊಂದರೆಗಳಾಗುತ್ತವೆ. ಈ ಸಮಸ್ಯೆಯನ್ನು ಹೋಗಲಾಡಿಸಲು ನಾವು ಕಿವಿಯನ್ನು ಸ್ವಚ್ಛಗೊಳಿಸುತ್ತೇವೆ. ಕಿವಿಯನ್ನು ಸ್ವಚ್ಛಗೊಳಿಸುವ ಸಂದರ್ಭದಲ್ಲಿ ವಿಶೇಷ ಕಾಳಜಿ ವಹಿಸಬೇಕು. ಇಲ್ಲದಿದ್ದಲ್ಲಿ ನಮ್ಮ ಕಿವಿ ಸಂಪೂರ್ಣ ಕಿವುಡಾಗುವ ಅಪಾಯವಿರುತ್ತದೆ.

ಕಿವಿಯಲ್ಲಿ ಒಂದು ರೀತಿಯ ಮೇಣ ಉತ್ಪತ್ತಿಯಾಗುವುದು ಸಾಮಾನ್ಯ ಪ್ರಕ್ರಿಯೆ. ವಾಸ್ತವವಾಗಿ ಇದು ನಮ್ಮ ಕಿವಿಯ ರಕ್ಷಣೆಗಾಗಿ ಉತ್ಪತ್ತಿಯಾಗುತ್ತದೆ. ಆದ್ರೆ ಅತಿಯಾಗಿ ಸಂಗ್ರಹವಾದಾಗ ಸಮಸ್ಯೆಯಾಗುತ್ತದೆ. ಕಿವಿಯನ್ನು ಶುಚಿಗೊಳಿಸುವ ಭರದಲ್ಲಿ ನಾವು ಕೆಲವೊಂದು ತಪ್ಪುಗಳನ್ನು ಮಾಡುತ್ತೇವೆ, ಅವು ಯಾವುವು ಅನ್ನೋದನ್ನು ನೋಡೋಣ.

ಹತ್ತಿಯ ಇಯರ್‌ ಬಡ್‌ ಬಳಕೆ : ಅನೇಕ ಜನರು ಹತ್ತಿಯ ಇಯರ್‌ ಬಡ್‌ಗಳನ್ನು ವಿವೇಚನೆಯಿಲ್ಲದೆ ಬಳಸುತ್ತಾರೆ. ಕಿವಿಗಳನ್ನು ಸ್ವಚ್ಛಗೊಳಿಸಲು ಇದು ಸರಿಯಾದ ಮಾರ್ಗವಲ್ಲ. ಹತ್ತಿಯ ಇಯರ್‌ ಬಡ್ಸ್‌, ಇಯರ್‌ವ್ಯಾಕ್ಸ್ ಅನ್ನು ಒಳಕ್ಕೆ ತಳ್ಳುತ್ತದೆ. ಇದರಿಂದಾಗಿ ಇಯರ್ ಡ್ರಮ್ ಸಿಡಿಯುವ ಅಪಾಯವಿರುತ್ತದೆ.

ಈ ವಸ್ತುಗಳನ್ನು ಕಿವಿಯಲ್ಲಿ ಹಾಕಬೇಡಿ: ಕೆಲವರು ತಮ್ಮ ಕಿವಿಗಳನ್ನು ಸ್ವಚ್ಛಗೊಳಿಸಲು ಟೂತ್‌ಪಿಕ್ಸ್, ಸೇಫ್ಟಿ ಪಿನ್‌ಗಳು, ಕೀ, ಹೇರ್ ಕ್ಲಿಪ್‌ಗಳಂತಹ ವಸ್ತುಗಳನ್ನು ಬಳಸುತ್ತಾರೆ.  ಇದರಿಂದಾಗಿ ಕಿವಿಯಲ್ಲಿ ಗಾಯ ಅಥವಾ ರಕ್ತಸ್ರಾವವಾಗುವ ಅಪಾಯವಿರುತ್ತದೆ. ಇಯರ್‌ ಡ್ರಮ್‌ಗೆ ಹಾನಿಯಾಗುತ್ತದೆ, ಇದರಿಂದ ನೀವು ಕಿವುಡರಾಗಬಹುದು.

ಇಯರ್‌ ಕ್ಯಾಂಡಲಿಂಗ್‌ನಿಂದ ದೂರವಿರಿ: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಇಯರ್‌ ಕ್ಯಾಂಡಲಿಂಗ್‌ ಸಾಕಷ್ಟು ಜನಪ್ರಿಯವಾಗುತ್ತಿದೆ. ಆದರೆ ಇದು ಪರಿಣಾಮಕಾರಿಯಲ್ಲ. ಈ ವಿಧಾನವು ಅಪಾಯದಿಂದ ಮುಕ್ತವಾಗಿಲ್ಲ. ಮುಖ, ಕೂದಲು ಮತ್ತು ಕಿವಿ ಸುಟ್ಟು ಹೋಗುವ ಅಪಾಯವಿದೆ.

ಕಿವಿಗಳನ್ನು ಸ್ವಚ್ಛಗೊಳಿಸಲು ಏನು ಮಾಡಬೇಕು?

ಕಿವಿಯನ್ನು ನೀವೇ ಸ್ವಚ್ಛಗೊಳಿಸಬೇಡಿ. ತಜ್ಞರ ಸಹಾಯ ಪಡೆಯಿರಿ. ನೀವೇ ಸ್ವಚ್ಛಗೊಳಿಸಲು ಬಯಸಿದರೆ ಕಿವಿಗೆ ಕೆಲವು ಹನಿ ಗ್ಲಿಸರಿನ್, ಮಿನರಲ್‌ ಆಯಿಲ್‌ ಅಥವಾ ಸಾಸಿವೆ ಎಣ್ಣೆಯನ್ನು ಹಾಕುವ ಮೂಲಕ ಇಯರ್‌ ವ್ಯಾಕ್ಸ್‌ ಅನ್ನು ಮೃದುವಾಗಿಸಿಕೊಂಡು ನಂತರ ಅದನ್ನು ಹೊರತೆಗೆಯಿರಿ.

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...