ಕಿಡ್ನಿಯಲ್ಲಿ ಕಲ್ಲು ಬರದಂತೆ ತಡೆಯಲು ನೀವು ಒಂದಷ್ಟು ಆಹಾರಗಳಿಂದ ದೂರವಿದ್ದರೆ ಸಾಕು. ಅವುಗಳು ಯಾವುವು ತಿಳಿಯೋಣ…..
ಬೀಜ ಇರೋ ಟೊಮೆಟೊ, ಬದನೆಕಾಯಿ, ಸೀಬೇಹಣ್ಣು, ದಾಳಿಂಬೆ ಮುಂತಾದವುಗಳನ್ನು ಹೆಚ್ಚಾಗಿ ಸೇವನೆ ಮಾಡುವುದರಿಂದ ಕಿಡ್ನಿ ಸ್ಟೋನ್ ಸಮಸ್ಯೆ ಕಂಡು ಬರುತ್ತದೆ ಎನ್ನಲಾಗಿದೆ. ಬೀಜಗಳು ಇರುವ ಆಹಾರ ಸೇವನೆಯಿಂದ ಕಿಡ್ನಿಯಲ್ಲಿ ಕಲ್ಲು ನಿರ್ಮಾಣ ಆಗುತ್ತದೆ. ಹಾಗಾಗಿ ಇವುಗಳನ್ನು ಮಿತವಾಗಿ ಸೇವಿಸಿ.
ಮೂತ್ರಪಿಂಡದಲ್ಲಿ ಕಲ್ಲು ಕಾಣಿಸಿಕೊಳ್ಳಲು ಮತ್ತೊಂದು ಪ್ರಮುಖ ಕಾರಣ ಎಂದರೆ ಕಡಿಮೆ ನೀರು ಕುಡಿಯುವುದು. ದಿನಕ್ಕೆ ಮೂರು ಲೀಟರ್ ಗಿಂತಲೂ ಕಡಿಮೆ ನೀರು ಸೇವನೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ.
ಆಹಾರ ಪದ್ಧತಿಯಲ್ಲಿ ಒಂದಷ್ಟು ಬದಲಾವಣೆ ಮಾಡಿಕೊಂಡರೆ, ಟೊಮೆಟೊದ ಬೀಜ ತೆಗೆದು ಸೇವಿಸಿದರೆ, ಸಾಕಷ್ಟು ನೀರು ಕುಡಿಯುತ್ತಿದ್ದರೆ ಕಿಡ್ನಿ ಸ್ಟೋನ್ ಶಸ್ತ್ರಚಿಕಿತ್ಸೆಯ ನೋವು ಅನುಭವಿಸಬೇಕಿಲ್ಲ.