alex Certify ಕಿಡ್ನಿಯಲ್ಲಿ ಕಲ್ಲು ಬೆಳೆಯದಂತೆ ತಡೆಯಬಲ್ಲ ಡಿಟಾಕ್ಸ್‌ ಪಾನೀಯಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಿಡ್ನಿಯಲ್ಲಿ ಕಲ್ಲು ಬೆಳೆಯದಂತೆ ತಡೆಯಬಲ್ಲ ಡಿಟಾಕ್ಸ್‌ ಪಾನೀಯಗಳು

ಕಿಡ್ನಿಯು ನಮ್ಮ ದೇಹದ ಪ್ರಮುಖ ಅಂಗ. ದೇಹದ ಅನೇಕ ಕಾರ್ಯಗಳನ್ನು ಪೂರೈಸಲು ಇದು ಸಹಾಯ ಮಾಡುತ್ತದೆ. ಆದ್ದರಿಂದ ಕಿಡ್ನಿ ಅಥವಾ ಮೂತ್ರಪಿಂಡವನ್ನು ಆರೋಗ್ಯಕರವಾಗಿಡುವುದು ಬಹಳ ಮುಖ್ಯ. ಮೂತ್ರಪಿಂಡದ ಆರೋಗ್ಯಕ್ಕಾಗಿ ನೀವು ಉತ್ತಮ ಆಹಾರ ಮತ್ತು ಸಾಕಷ್ಟು ನೀರನ್ನು ಕುಡಿಯಬೇಕು.

ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯುವುದರಿಂದ ಮೂತ್ರಪಿಂಡಕ್ಕೆ ಹಾನಿಯಾಗುವ ಅಪಾಯ ಕಡಿಮೆ. ಅಷ್ಟೇ ಅಲ್ಲ ಕಿಡ್ನಿಯನ್ನು ಡಿಟಾಕ್ಸ್ ಮಾಡುವುದು ಕೂಡ ಬಹಳ ಮುಖ್ಯ. ಇದಕ್ಕಾಗಿ ಕೆಲವೊಂದು ಪಾನೀಯಗಳನ್ನು ನೀವು ಸೇವಿಸಬೇಕು.

ಆಪಲ್‌ ಸೈಡರ್‌ ವಿನೆಗರ್‌ನಿಂದ ತಯಾರಿಸಿದ ಪಾನೀಯ: ಆಪಲ್ ಸೈಡರ್ ವಿನೆಗರ್‌ನಲ್ಲಿರುವ ಆಂಟಿ ಒಕ್ಸಿಡೆಂಟ್‌ಗಳು ಮತ್ತು ಸಿಟ್ರಿಕ್‌ ಆಮ್ಲವು ಮೂತ್ರಪಿಂಡದ ಕಲ್ಲುಗಳನ್ನು ಕರಗಿಸಲು ಮತ್ತು ವಿಷವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ನೀವು ಆಪಲ್‌ ಸೈಡರ್‌ ವಿನೆಗರ್‌ ಬಳಸಿ ಡಿಟಾಕ್ಸ್ ಪಾನೀಯವನ್ನು ತಯಾರಿಸಬಹುದು. ಒಂದು ಲೋಟ ಉಗುರು ಬೆಚ್ಚಗಿನ ನೀರಿಗೆ ಒಂದು ಚಮಚ ಆಪಲ್ ಸೈಡರ್ ವಿನೆಗರ್ ಅನ್ನು ಸೇರಿಸಿ. ಮತ್ತು ಇದನ್ನು ಪ್ರತಿದಿನ ಸೇವಿಸಿ. ಹೀಗೆ ಮಾಡುವುದರಿಂದ ನಿಮ್ಮ ಮೂತ್ರಪಿಂಡವು ನಿರ್ವಿಷಗೊಳ್ಳುತ್ತದೆ.

ದಾಳಿಂಬೆ ರಸ: ದಾಳಿಂಬೆಯಲ್ಲಿ ಪೊಟ್ಯಾಸಿಯಮ್ ಸಮೃದ್ಧವಾಗಿದೆ. ಮೂತ್ರಪಿಂಡದಲ್ಲಿನ ಕಲ್ಲುಗಳ ಸಮಸ್ಯೆಯನ್ನು ತೆಗೆದುಹಾಕುವಲ್ಲಿ ಇದು ಪರಿಣಾಮಕಾರಿಯಾಗಿದೆ. ಅಷ್ಟೇ ಅಲ್ಲ, ಇದರಲ್ಲಿರುವ ಗುಣಗಳು ಕಲ್ಲುಗಳ ರಚನೆಯನ್ನು ತಡೆಯುತ್ತದೆ. ಪ್ರತಿದಿನ ನೀವು ತಾಜಾ ದಾಳಿಂಬೆ ರಸವನ್ನು ಸೇವಿಸಬಹುದು.

ಬೀಟ್ರೂಟ್ ಜ್ಯೂಸ್‌: ಬೀಟ್ರೂಟ್‌ನಲ್ಲಿ ಬೀಟೈನ್ ಇದೆ. ಇದು ತುಂಬಾ ಪ್ರಯೋಜನಕಾರಿ ಫೈಟೊಕೆಮಿಕಲ್ ಆಗಿದೆ. ಇದು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದೆ. ನೀವು ಪ್ರತಿದಿನ ಬೀಟ್ ರೂಟ್‌ ಜ್ಯೂಸ್ ಸೇವಿಸಿದರೆ ಮೂತ್ರಪಿಂಡಗಳನ್ನು ಇದು ನಿರ್ವಿಷಗೊಳಿಸುತ್ತದೆ. ಜೊತೆಗೆ ಮೂತ್ರಪಿಂಡದಲ್ಲಿ ಕಲ್ಲು ಬೆಳೆಯುವ ಅಪಾಯವಿರುವುದಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...