alex Certify ಕಾಶಿ ವಿಶ್ವನಾಥನ ದೇಗುಲದಲ್ಲಿ ಡಮರು ಬಾರಿಸಿದ ಪ್ರಧಾನಿ ಮೋದಿ….! ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾಶಿ ವಿಶ್ವನಾಥನ ದೇಗುಲದಲ್ಲಿ ಡಮರು ಬಾರಿಸಿದ ಪ್ರಧಾನಿ ಮೋದಿ….! ವಿಡಿಯೋ ವೈರಲ್

ವಾರಣಾಸಿ: ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ತಮ್ಮ ತವರು ಕ್ಷೇತ್ರ ವಾರಣಾಸಿಯ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.

ಪ್ರಧಾನಮಂತ್ರಿಯವರು ಪ್ರಾರ್ಥನೆ ಸಲ್ಲಿಸಿದ ನಂತರ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಭಕ್ತರ ಕೈಲಿದ್ದ ಡಮರು ತೆಗೆದುಕೊಂಡು ಸ್ವತಃ ತಾವೇ ನುಡಿಸಿದ್ದು ವಿಶೇಷವಾಗಿದೆ. ಅದೇ ದಿನ ಪ್ರಧಾನಿಯವರು ಉತ್ತರ ಪ್ರದೇಶದ ಕೊನೆಯ ಹಂತದ ವಿಧಾನಸಭಾ ಚುನಾವಣೆಗೆ ತಮ್ಮ ಪಕ್ಷದ ಪ್ರಚಾರಕ್ಕಾಗಿ ರೋಡ್ ಶೋ ನಡೆಸಿದ್ದಾರೆ.

ಯುಪಿ ಚುನಾವಣೆಗಳು ಅಂತ್ಯಗೊಳ್ಳುತ್ತಿದ್ದಂತೆ, ವಾರಣಾಸಿ ಎಲ್ಲಾ ಪ್ರಮುಖ ಪಕ್ಷಗಳ ಪ್ರಮುಖ ನಾಯಕರ ಆಗಮನದಿಂದ ಅಬ್ಬರಿಸಿದೆ. ಏಳನೇ ಹಂತದ ಮತದಾನದೊಂದಿಗೆ ಮಾರ್ಚ್ 7 ರಂದು ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಮುಕ್ತಾಯವಾಗಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...