alex Certify ಕಾಳರಾತ್ರಿ ಅವತಾರ ಹಾಗೂ ನೈವೇದ್ಯದ ಕುರಿತು ಮಾಹಿತಿ ಇಲ್ಲಿದೆ ನೋಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾಳರಾತ್ರಿ ಅವತಾರ ಹಾಗೂ ನೈವೇದ್ಯದ ಕುರಿತು ಮಾಹಿತಿ ಇಲ್ಲಿದೆ ನೋಡಿ

ಕಾಳರಾತ್ರಿ ಅವತಾರ ಹಾಗೂ ನೈವೇದ್ಯದ ಕುರಿತು ಮಾಹಿತಿ ಇಲ್ಲಿದೆ ನೋಡಿ ನವರಾತ್ರಿ 7ನೇ ದಿನದಂದು ದುರ್ಗೆಯನ್ನು ಕಾಳರಾತ್ರಿ ಸ್ವರೂಪದಲ್ಲಿ ಆರಾಧಿಸಲಾಗುತ್ತದೆ, ರೌದ್ರವತಾರದಲ್ಲಿ ಇರುವ ತಾಯಿಯು ದುಷ್ಟಶಕ್ತಿಯನ್ನು ದೂರ ಮಾಡಿ ತನ್ನ ಭಕ್ತರನ್ನು ಸಲಹುತ್ತಾಳೆ ಎಂಬ ನಂಬಿಕೆ ಇದೆ.ರಕ್ತಾಬೀಜಾಸುರನನ್ನು ವಧಿಸುವುದಕ್ಕೆಂದು ದೇವಿಯು ಕಾಳರಾತ್ರಿ ಸ್ವರೂಪದಲ್ಲಿ ಅವತರಿಸಿದ್ದಾಳಂತೆ.

ಕಾಳರಾತ್ರಿ ಮಾತೆಯ ವಾಹನ ಕತ್ತೆಯಾಗಿದ್ದು, ದೇವಿಗೆ ನಾಲ್ಕು ಕೈಗಳಿವೆ. ಒಂದು ಕೈಯಲ್ಲಿ ಅಭಯ ಮುದ್ರೆ, ಇನ್ನೊಂದು ಕೈಯಲ್ಲಿ ವರಮುದ್ರೆ, ಮತ್ತೆರೆಡು ಕೈಗಳಲ್ಲಿ ಆಯುಧಗಳನ್ನು ಹಿಡಿದುಕೊಂಡಿರುತ್ತಾಳೆ. 3 ಕಣ್ಣುಗಳನ್ನು ಹೊಂದಿರುವ ಕಾಳರಾತ್ರಿದೇವಿಯು ನೋಡುವುದಕ್ಕೆ ಭಯಂಕರವಾಗಿದ್ದರೂ, ತನ್ನ ಭಕ್ತರಿಗೆ ಸದಾ ಶುಭವನ್ನುಂಟು ಮಾಡುವವಳು.

ಕಾಳರಾತ್ರಿ ದೇವಿಯ ಆರಾಧನೆಯಿಂದ ಮನಸ್ಸಿನಲ್ಲಿರುವ ಭಯ ದೂರವಾಗಿ ಮಾನಸಿಕ ಶಾಂತಿ ಸಿಗುತ್ತದೆ. ಪಾಪ ನಿವಾರಣೆ ಮಾಡಿ ಸನ್ಮಾರ್ಗದಲ್ಲಿ ನಡೆಯುವಂತೆ ಮಾತೆ ಆರ್ಶೀವದಿಸುತ್ತಾಳೆ.

ಕಾಳರಾತ್ರಿದೇವಿಗೆ ಮಲ್ಲಿಗೆ ಹೂ ಎಂದರೆ ತುಂಬ ಇಷ್ಟ. ಹಾಗೇ ಅನ್ನದಿಂದ ಮಾಡಿದ ಪಾಯಸ, ಬೆಲ್ಲದ ಅನ್ನವನ್ನು ತಾಯಿಗೆ ನೈವೇದ್ಯವಾಗಿಟ್ಟರೆ ದೇವಿ ಸಂತುಷ್ಟಳಾಗುತ್ತಾಳೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...