
ಕಾಳರಾತ್ರಿ ಮಾತೆಯ ವಾಹನ ಕತ್ತೆಯಾಗಿದ್ದು, ದೇವಿಗೆ ನಾಲ್ಕು ಕೈಗಳಿವೆ. ಒಂದು ಕೈಯಲ್ಲಿ ಅಭಯ ಮುದ್ರೆ, ಇನ್ನೊಂದು ಕೈಯಲ್ಲಿ ವರಮುದ್ರೆ, ಮತ್ತೆರೆಡು ಕೈಗಳಲ್ಲಿ ಆಯುಧಗಳನ್ನು ಹಿಡಿದುಕೊಂಡಿರುತ್ತಾಳೆ. 3 ಕಣ್ಣುಗಳನ್ನು ಹೊಂದಿರುವ ಕಾಳರಾತ್ರಿದೇವಿಯು ನೋಡುವುದಕ್ಕೆ ಭಯಂಕರವಾಗಿದ್ದರೂ, ತನ್ನ ಭಕ್ತರಿಗೆ ಸದಾ ಶುಭವನ್ನುಂಟು ಮಾಡುವವಳು.
ಕಾಳರಾತ್ರಿ ದೇವಿಯ ಆರಾಧನೆಯಿಂದ ಮನಸ್ಸಿನಲ್ಲಿರುವ ಭಯ ದೂರವಾಗಿ ಮಾನಸಿಕ ಶಾಂತಿ ಸಿಗುತ್ತದೆ. ಪಾಪ ನಿವಾರಣೆ ಮಾಡಿ ಸನ್ಮಾರ್ಗದಲ್ಲಿ ನಡೆಯುವಂತೆ ಮಾತೆ ಆರ್ಶೀವದಿಸುತ್ತಾಳೆ.
ಕಾಳರಾತ್ರಿದೇವಿಗೆ ಮಲ್ಲಿಗೆ ಹೂ ಎಂದರೆ ತುಂಬ ಇಷ್ಟ. ಹಾಗೇ ಅನ್ನದಿಂದ ಮಾಡಿದ ಪಾಯಸ, ಬೆಲ್ಲದ ಅನ್ನವನ್ನು ತಾಯಿಗೆ ನೈವೇದ್ಯವಾಗಿಟ್ಟರೆ ದೇವಿ ಸಂತುಷ್ಟಳಾಗುತ್ತಾಳೆ.