
ಹೌದು, ಕವ್ವಾಲಿ ಪ್ರದರ್ಶನದ ಮಧ್ಯದಲ್ಲಿ ವೇದಿಕೆ ಕುಸಿದ ನಂತರವೂ ಕಲಾವಿದರ ಗುಂಪು ಹೇಗೆ ಪ್ರತಿಕ್ರಿಯಿಸಿತು ಎಂಬ ಬಗ್ಗೆ ವಿಡಿಯೋದಲ್ಲಿ ನೋಡಬಹುದು. ಕವ್ವಾಲಿ ಕಾರ್ಯಕ್ರಮ ನಡೆಯುತ್ತಿರುವಾಗ ಸುಮಾರು 15 ರಿಂದ 20 ಜನರು ವೇದಿಕೆಯಲ್ಲಿ ಕುಳಿತಿದ್ದಾರೆ. ಆದರೆ, ಇದ್ದಕ್ಕಿದ್ದಂತೆ ವೇದಿಕೆಯು ಕುಸಿದು ಬೀಳುತ್ತದೆ.
ಈ ವೇಳೆ ವೇದಿಕೆಯಲ್ಲಿದ್ದವರು ಗಾಬರಿಯಾಗಿ ಎದ್ದೇಳಲು ಪ್ರಯತ್ನಿಸಿದಾಗ, ಮುಖ್ಯ ಕಲಾವಿದ ಅವರನ್ನು ಗದರಿಸಿ ಕುಳಿತುಕೊಳ್ಳುವಂತೆ ಸೂಚಿಸಿದ್ದಾನೆ. ವೇದಿಕೆ ಕುಸಿದು ಬಿದ್ದರೂ ಕೂಡ ನಿರಾಂತಕವಾಗಿ ಕಲಾವಿದರು ತಮ್ಮ ಪ್ರದರ್ಶನವನ್ನು ಮುಂದುವರೆಸಿದ್ದಾರೆ.
ಈ ಉಲ್ಲಾಸದ ವಿಡಿಯೋವನ್ನು ಐಎಎಸ್ ಅಧಿಕಾರಿ ಅವನೀಶ್ ಶರಣ್ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಕಲಾವಿದ ಯಾವುದೇ ಸಂದರ್ಭದಲ್ಲೂ ಗಾಬರಿಯಾಗಬಾರದು ಎಂದು ವಿಡಿಯೋಗೆ ಶೀರ್ಷಿಕೆ ನೀಡಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದ್ದು, ಇದುವರೆಗೆ 2 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳು ಪಡೆದುಕೊಂಡಿದೆ. ವಿಡಿಯೋ ನೋಡಿದ ಜನರು ನಗೆಗಡಲಲ್ಲಿ ತೇಲಿದ್ದಾರೆ.