ಕಾರ್ತಿಕ ಮಾಸ ಬಹಳ ಪವಿತ್ರವಾದ ಮಾಸ. ಈ ಮಾಸದಲ್ಲಿ ಹಲವಾರು ಹಬ್ಬಗಳನ್ನು, ಪೂಜೆಗಳನ್ನು ಮಾಡುತ್ತಾರೆ. ಹಾಗಾಗಿ ಈ ಕಾರ್ತಿಕ ಮಾಸದಲ್ಲಿ ಈ 2 ಗಿಡಗಳನ್ನು ಪೂಜೆ ಮಾಡುವುದರಿಂದ, ದೀಪಾರಾಧನೆ ಮಾಡುವುದರಿಂದ ನಿಮಗೆ ಪುಣ್ಯ ಪ್ರಾಪ್ತಿಯಾಗುತ್ತದೆಯಂತೆ.
ತುಳಸಿ ಗಿಡದಲ್ಲಿ ಲಕ್ಷ್ಮಿದೇವಿ ನೆಲೆಸಿರುತ್ತಾಳೆ. ಹಾಗೆ ನೆಲ್ಲಿಕಾಯಿ ಗಿಡದಲ್ಲಿ ಸಾಕ್ಷಾತ್ ವಿಷ್ಣು ನೆಲೆಸಿರುತ್ತಾನಂತೆ. ಹಾಗಾಗಿ ಕಾರ್ತಿಕ ಮಾಸದಲ್ಲಿ ವಿಶೇಷವಾಗಿ ತುಳಸಿ ಗಿಡ ಮತ್ತು ನೆಲ್ಲಿಕಾಯಿ ಗಿಡವನ್ನು ಒಟ್ಟಾಗಿ ನೆಟ್ಟು ಪೂಜಿಸುತ್ತಾರೆ. ಹೀಗೆ ಮಾಡಿದರೆ ನಿಮಗೆ ಲಕ್ಷ್ಮಿನಾರಾಯಣರ ಅನುಗ್ರಹವಾಗಿ ಮನೆಯಲ್ಲಿ ಲಕ್ಷ್ಮಿದೇವಿ ನೆಲೆಸಿರುತ್ತಾಳಂತೆ.
ಹಾಗೇ ತುಳಸಿ ಹಾಗೂ ನೆಲ್ಲಿಕಾಯಿ ಗಿಡವನ್ನು ಪ್ರತಿದಿನ ಪೂಜೆ ಮಾಡುವಾಗ ದೀಪಾರಾಧನೆ ಮಾಡಬೇಕು. ಆ ವೇಳೆ 12 , 16 ದೀಪಗಳನ್ನು ಆರಾಧನೆ ಮಾಡಿದರೆ ನಿಮ್ಮ ಕುಟುಂಬಕ್ಕೆ ಸಕಲ ಸೌಭಾಗ್ಯವನ್ನು ಲಕ್ಷ್ಮಿನಾರಾಯಣರು ನೀಡುತ್ತಾರೆ ಎನ್ನಲಾಗಿದೆ.