alex Certify ಕಾರಿನಲ್ಲಿ ಸೆಕ್ಸ್‌ ಮಾಡ್ತಿದ್ದವನಿಗೆ ದಂಡ ವಿಧಿಸಿದ್ದು ಮಾತ್ರ ಬೇರೆ ಕಾರಣಕ್ಕೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾರಿನಲ್ಲಿ ಸೆಕ್ಸ್‌ ಮಾಡ್ತಿದ್ದವನಿಗೆ ದಂಡ ವಿಧಿಸಿದ್ದು ಮಾತ್ರ ಬೇರೆ ಕಾರಣಕ್ಕೆ…!

ಕಾರಿನಲ್ಲಿ ಹೋಗುತ್ತಿದ್ದ ಸಮಯದಲ್ಲಿ ಮಹಿಳೆಯ ಜತೆ ಸೆಕ್ಸ್​ನಲ್ಲಿ ತೊಡಗಿಸಿಕೊಂಡಿದ್ದ ವ್ಯಕ್ತಿಯೊಬ್ಬನಿಗೆ ಪೊಲೀಸರು ದಂಡ ವಿಧಿಸಿದ್ದಾರೆ. ಇದಕ್ಕೆ ಕಾರಣ ಸೆಕ್ಸ್​ ಮಾಡುತ್ತಿದ್ದುದು ಅಲ್ಲ, ಬದಲಿಗೆ ಆತ ಆ ಸಮಯದಲ್ಲಿ ಸೀಟ್​ ಬೆಲ್ಟ್​ ಧರಿಸಲಿಲ್ಲ ಎಂದು !

ಇಂಥದ್ದೊಂದು ವಿಚಿತ್ರ ಘಟನೆ ನಡೆದಿರುವುದು . ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್‌ನ ಹೆದ್ದಾರಿಯಲ್ಲಿ. ಅಮನ್​ ಎಂಬಾತನಿಗೆ ಪೊಲೀಸರು £600 (ಅಂದಾಜು ರೂ. 56,000) ದಂಡ ವಿಧಿಸಿದ್ದಾರೆ.

ಈತ ಸೀಟ್​ ಬೆಲ್ಟ್​ ಧರಿಸದೇ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವುದು ಸಿಸಿ ಟಿವಿಯಲ್ಲಿ ಸೆರೆಯಾದ ನಂತರ ದಂಡ ವಿಧಿಸಲಾಗಿದೆ.

ಹೆದ್ದಾರಿಯ ಒಂದೆಡೆಯಿಂದ ಬರುತ್ತಿರುವಾಗಲೇ ಮತ್ತೊಂದು ಕಡೆಯಲ್ಲಿನ ಕ್ಯಾಮೆರಾದಲ್ಲಿ ಈ ದೃಶ್ಯ ಸೆರೆಯಾಗಿತ್ತು. ಆತ ಬರುತ್ತಿದ್ದಂತೆಯೇ ಪೊಲೀಸರು ದಂಡ ವಿಧಿಸಿದ್ದಾರೆ. ನಂತರ ಇದರ ವಿಡಿಯೋ ಹರಿಬಿಡಲಾಗಿದ್ದು, ಜನರಿಗೆ ಎಚ್ಚರಿಕೆ ನೀಡಲಾಗಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವಿಶ್ವಾದ್ಯಂತ ಸುದ್ದಿ ಮಾಡುತ್ತಿದೆ.

ಈ ರೀತಿ ಕಾರು ಚಾಲನೆ ಮಾಡುತ್ತಲೇ ಸೀಟ್​ಬೆಲ್ಟ್​ ಧರಿಸದೇ ಇರುವುದು ಪ್ರಾಣಕ್ಕೆ ಅಪಾಯಕಾರಿಯಾಗಿದೆ ಎಂದು ದಂಡ ವಿಧಿಸಿರುವುದಾಗಿ ಆಸ್ಟ್ರೇಲಿಯಾ ಪೊಲೀಸರು ಹೇಳಿದ್ದಾರೆ. ಪ್ರಯಾಣಿಕರ ಸುರಕ್ಷತೆ ನಮ್ಮ ಕರ್ತವ್ಯ ಎಂದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...