alex Certify ಕಾರಿನಲ್ಲಿ ಕುಳಿತು ಮುದ್ದಾಗಿ ಹಾಡಿದ ತಂದೆ-ಮಗ: ಕ್ಯೂಟ್‌ನೆಸ್ ಓವರ್‌ಲೋಡೆಡ್ ಅಂದ್ರು ನೆಟ್ಟಿಗರು..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾರಿನಲ್ಲಿ ಕುಳಿತು ಮುದ್ದಾಗಿ ಹಾಡಿದ ತಂದೆ-ಮಗ: ಕ್ಯೂಟ್‌ನೆಸ್ ಓವರ್‌ಲೋಡೆಡ್ ಅಂದ್ರು ನೆಟ್ಟಿಗರು..!

Viral Video: Little Boy Sings in Car With Father, Netizens Call it Cuteness Overload. Watchಕಾರಿನಲ್ಲಿ ಕುಳಿತು ತಂದೆ ಮತ್ತು ಮಗ ಇಬ್ಬರೂ ಒಟ್ಟಿಗೆ ಹಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ತಂದೆಯನ್ನು ಇವಾನ್ಹೋ ಸ್ಪಲ್ಲುಟೊ ಎಂದು ಗುರುತಿಸಲಾಗಿದ್ದು, ಅವರ ಮುದ್ದಾದ ಮಗ ಜಾಸ್ಪರ್‌ನೊಂದಿಗೆ ಅದ್ಭುತವಾಗಿ ಹಾಡಿದ್ದಾರೆ. ಇವಾನ್ಹೋ ಈ ವಿಡಿಯೋವನ್ನು ಟಿಕ್ ಟಾಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ನಂತರ ವೈರಲ್ ಸಿಂಗಿಂಗ್ ವಿಡಿಯೋಸ್ ಹಂಚಿಕೊಂಡಿದ್ದು, 16 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ.

ತಂದೆ ಮತ್ತು ಮಗ ಕಾರಿನ ಆಸನದಲ್ಲಿ ಕುಳಿತು ಸ್ಟೆಪ್ ಅಪ್ 3  ಚಲನಚಿತ್ರದ ಮೆನೆಸ್ಕಿನ್ ಅವರ ಬೆಗ್ಗಿನ್ ಹಾಡನ್ನು ಹಾಡಿದ್ದಾರೆ. ಇದನ್ನು ಬಾಲಕನ ತಾಯಿ ವಿಡಿಯೋ ಚಿತ್ರೀಕರಣ ಮಾಡಿದ್ದಾರೆ ಎಂದು ತೋರುತ್ತದೆ.

ಬಾಲಕ ತನ್ನ ತಂದೆಯ ಮಡಿಲಲ್ಲಿ ಅವನಿಗೆ ಎದುರಾಗಿ ಕುಳಿತಿದ್ದು, ಇಬ್ಬರೂ ಕೂಡ ತಮ್ಮ ಹೃದಯದಿಂದ ಹಾಡನ್ನು ಹಾಡಿದ್ದಾರೆ. ಕಾರಿನಲ್ಲಿ ಕುಳಿತು ಹಾಡು ಹೇಳುವಾಗ ತಂದೆ-ಮಗ ಹೇಗೆ ಮುದ್ದಾಗಿ ಕಾಣುತ್ತಿದ್ದಾರೆ ಎಂದು ನೆಟ್ಟಿಗರು ಹಾಡಿ ಹೊಗಳಿದ್ದಾರೆ. ಕಾಮೆಂಟ್ ವಿಭಾಗವನ್ನು ಪ್ರೀತಿ ಮತ್ತು ಹೃದಯದ ಎಮೋಜಿಯಿಂದ ತುಂಬಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...