alex Certify ‘ಕಾಮೆಡ್ ಕೆ’ ಕೌನ್ಸೆಲಿಂಗ್ ಗೆ ಹಾಜರಾದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್; ಸಿಇಟಿ ಮೂಲಕ ಸೀಟು ಪಡೆದರೆ ಸಂಪೂರ್ಣ ಶುಲ್ಕ ವಾಪಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಕಾಮೆಡ್ ಕೆ’ ಕೌನ್ಸೆಲಿಂಗ್ ಗೆ ಹಾಜರಾದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್; ಸಿಇಟಿ ಮೂಲಕ ಸೀಟು ಪಡೆದರೆ ಸಂಪೂರ್ಣ ಶುಲ್ಕ ವಾಪಸ್

ಪ್ರಸ್ತುತ ಇಂಜಿನಿಯರಿಂಗ್ ಕೋರ್ಸ್ ಗಳ ಪ್ರವೇಶಾತಿಗೆ ಕೌನ್ಸೆಲಿಂಗ್ ನಡೆಯುತ್ತಿದ್ದು ಇದರ ಮಧ್ಯೆ, ಸಿಇಟಿಗಿಂತ ಮುಂಚೆ ಕಾಮೆಡ್ ಕೆ ಕೌನ್ಸೆಲಿಂಗ್ ನಡೆಸಿದ ಕಾರಣ ಇಕ್ಕಟ್ಟಿಗೆ ಸಿಲುಕಿದ್ದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ಒಂದು ಇಲ್ಲಿದೆ. ಒಂದು ವೇಳೆ ಈ ವಿದ್ಯಾರ್ಥಿಗಳು ಸಿಇಟಿ ಮೂಲಕ ಸೀಟು ಪಡೆದರೆ ಸಂಪೂರ್ಣ ಶುಲ್ಕ ವಾಪಸ್ ನೀಡಲು ಕಾಮೆಡ್ ಕೆ ಒಪ್ಪಿಗೆ ಸೂಚಿಸಿದೆ.

ಸಿಇಟಿಗಿಂತ ಕಾಮೆಡ್ ಕೆ ಮೂಲಕ ಆಯ್ಕೆಯಾದವರಿಗೆ ಶುಲ್ಕ ಜಾಸ್ತಿ ಇದ್ದ ಕಾರಣ ವಿದ್ಯಾರ್ಥಿಗಳು, ತಮಗೆ ಸಿಇಟಿ ಸೀಟು ಸಿಕ್ಕರೂ ಸಹ ಇದಕ್ಕಿಂತ ಮೊದಲು ಕಾಮೆಡ್ ಗೆ ಮೂಲಕ ಆಯ್ಕೆಯಾದರೆ ಶುಲ್ಕ ಪಾವತಿಸಬೇಕಾಗುವ ಕಾರಣ ಇದು ವಾಪಸ್ ಬರುತ್ತದೋ ಇಲ್ಲವೋ ಎಂಬ ಆತಂಕಕ್ಕೆ ಸಿಲುಕಿದ್ದರು. ಈ ಸಮಸ್ಯೆ ಈಗ ಬಗೆ ಹರಿದಿದ್ದು ವಿದ್ಯಾರ್ಥಿಗಳು ನಿಶ್ಚಿಂತೆಯಾಗಿ ಕಾಮೆಡ್ ಕೆ ಕೌನ್ಸೆಲಿಂಗ್ ಗೆ ಹಾಜರಾಗಬಹುದಾಗಿದೆ. ಸಿಇಟಿ ಕೌನ್ಸೆಲಿಂಗ್ ನಲ್ಲಿ ಸೀಟ್ ಸಿಕ್ಕರೆ ಕಾಮೆಡ್ ಕೆ ಶುಲ್ಕ ಮರಳಿ ಸಿಗುತ್ತದೆ.

ಈ ಮೊದಲು ಸಿಇಟಿ ಕೌನ್ಸೆಲಿಂಗ್ ಮೊದಲು ನಡೆದು ಬಳಿಕ ಕಾಮೆಡ್ ಕೆ ಕೌನ್ಸೆಲಿಂಗ್ ನಡೆಸಲಾಗುತ್ತಿತ್ತು. ಆದರೆ ಈ ಬಾರಿ ಹಲವು ಕಾರಣಗಳಿಗಾಗಿ ಸಿಇಟಿ ಕೌನ್ಸೆಲಿಂಗ್ ವಿಳಂಬವಾಗಿದ್ದು, ಕಾಮೆಡ್ ಕೆ ಮೊದಲು ಕೌನ್ಸೆಲಿಂಗ್ ಆರಂಭಿಸಿತ್ತು. ಹೀಗಾಗಿ ಸರ್ಕಾರ ಈ ವಿದ್ಯಾರ್ಥಿಗಳಿಗೆ ಸಿಇಟಿ ಮೂಲಕ ಸೀಟು ಸಿಕ್ಕರೆ ಸಂಪೂರ್ಣ ಶುಲ್ಕ ಮರಳಿಸಬೇಕು ಎಂಬ ಷರತ್ತನ್ನು ವಿಧಿಸಿತ್ತು. ಇದಕ್ಕೆ ಕಾಮೆಡ್ ಕೆ ಆಡಳಿತ ಮಂಡಳಿಗಳು ಈಗ ಒಪ್ಪಿಗೆ ಸೂಚಿಸಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...