alex Certify ಕಾಮಾಸಕ್ತಿ ಹೆಚ್ಚಿಸಲು ನೆರವಾಗುತ್ತೆ ಈ ʼಆಕ್ಯುಪ್ರೆಶರ್ʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾಮಾಸಕ್ತಿ ಹೆಚ್ಚಿಸಲು ನೆರವಾಗುತ್ತೆ ಈ ʼಆಕ್ಯುಪ್ರೆಶರ್ʼ

ಕಾಮಾಸಕ್ತಿಯನ್ನು ಹೆಚ್ಚಿಸುವ ಹಾಗೂ ಕಾಮಾಸಕ್ತಿಯನ್ನು ಕಡಿಮೆ ಮಾಡುವ ಅತ್ಯಗತ್ಯ ಹಾರ್ಮೋನ್ ಒಂದು ಮಾನವನ ದೇಹದಲ್ಲಿರುತ್ತದೆ. ಅಚಾನಕ್ ನಿಮ್ಮ ಕಾಮಾಸಕ್ತಿ ಕಡಿಮೆಯಾದಲ್ಲಿ ಕೆಲವೊಂದು ಪರ್ಯಾಯ ಚಿಕಿತ್ಸೆಗಳಿಂದ ನೀವು ಸಹಜ ಸ್ಥಿತಿಗೆ ಬರಬಹುದು. ಪರ್ಯಾಯ ಚಿಕಿತ್ಸೆಯಲ್ಲಿ ಆಕ್ಯುಪ್ರಶರ್ ಬಹಳ ಪ್ರಯೋಜನಕಾರಿ ಚಿಕಿತ್ಸೆ ಎಂದು ನಂಬಲಾಗಿದೆ. ಕಾಮಾಸಕ್ತಿಯನ್ನು ಹೆಚ್ಚಿಸಲು ಒಂದು ವಿಶೇಷ ಆಕ್ಯುಪ್ರಶರ್ ಪಾಯಿಂಟ್ ಇದ್ದು, ಅದನ್ನು ಪ್ರೆಸ್ ಮಾಡುವುದರಿಂದ ಕಾಮಾಸಕ್ತಿಯನ್ನು ಹೆಚ್ಚಿಸಿಕೊಳ್ಳಬಹುದಾಗಿದೆ.

ಆಕ್ಯುಪ್ರಶರ್ ಚಿಕಿತ್ಸೆ ಅನೇಕ ರೋಗಗಳನ್ನು ಕಡಿಮೆ ಮಾಡಲು ಸಹಕಾರಿ. ಕಾಮಾಸಕ್ತಿಯ ಬಗ್ಗೆ ಬೇರೆಯವರ ಬಳಿ ಹೇಳಲು ಎಲ್ಲರೂ ಇಷ್ಟಪಡುವುದಿಲ್ಲ. ವೈದ್ಯರ ಬಳಿಯೂ ಹೋಗುವುದಿಲ್ಲ. ಅಂತವರು ಈ ಆಕ್ಯುಪ್ರಶರ್ ಚಿಕಿತ್ಸೆ ಮಾಡಿಕೊಂಡು ಕಾಮಾಸಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು. ಶೇಕಡಾ 40ರಷ್ಟು ಮಹಿಳೆಯರು ಮುಟ್ಟು ನಿಂತ ನಂತ್ರ ಕಾಮಾಸಕ್ತಿ ಕಡಿಮೆಯಾಗುತ್ತೆ ಎಂಬುದನ್ನು ಒಪ್ಪಿಕೊಳ್ಳುತ್ತಾರೆ. ಇದಕ್ಕೆ ಮುಖ್ಯ ಕಾರಣ ಹಾರ್ಮೋನ್ ನಲ್ಲಾಗುವ ಬದಲಾವಣೆ. ಪುರುಷರಲ್ಲಿ 30ರಿಂದ 70 ವರ್ಷದವರೆಗೆ ಕಾಮಾಸಕ್ತಿ ಕಡಿಮೆಯಾಗುವ ಸಮಸ್ಯೆ ಕಾಡುತ್ತದೆ. ಟೆಸ್ಟೋಸ್ಟಿರಾನ್ ಪ್ರಮಾಣ ಕಡಿಮೆಯಿರುವುದೇ ಇದಕ್ಕೆ ಕಾರಣ. ಈ ವೇಳೆ ಪುರುಷ ಹಾಗೂ ಮಹಿಳೆ ಇಬ್ಬರೂ ಆಕ್ಯುಪ್ರಶರ್ ವಿಧಾನ ಬಳಸಬಹುದಾಗಿದೆ.

ಕಾಮಾಸಕ್ತಿ ಹೆಚ್ಚಿಸಲು ದೇಹದ ಎರಡು ಭಾಗಗಳಲ್ಲಿ ಆಕ್ಯುಪ್ರಶರ್ ಮಾಡಿಕೊಳ್ಳಬೇಕು.

ಹೊಟ್ಟೆಯ ಪಾಯಿಂಟ್ : ಹೊಟ್ಟೆಯ ಹೊಕ್ಕಳ ಪಾಯಿಂಟ್ ನಾಲ್ಕರಿಂದ ಐದು ನಿಮಿಷ ಬೆರಳಿನ ಸಹಾಯದಿಂದ ಒತ್ತಿಹಿಡಿಯಿರಿ. ನಂತ್ರ ಹೊಕ್ಕಳಿನಿಂದ ಎರಡು ಬೆರಳು ಕೆಳಗೆ ಹೋಗಿ. ಸ್ವಲ್ಪ ಹೊತ್ತು ಆ ಪಾಯಿಂಟ್ ಪ್ರೆಸ್ ಮಾಡಿ. ಬೆಳಿಗ್ಗೆ ಹಾಗೂ ರಾತ್ರಿ ದಿನಕ್ಕೆ ಹತ್ತತ್ತು ನಿಮಿಷ ಮಾಡಿ. ಇದು ಕಾಮಾಸಕ್ತಿಯನ್ನು ಹೆಚ್ಚಿಸುತ್ತದೆ.

ಕಿಡ್ನಿ ಪಾಯಿಂಟ್ : ಕಿಡ್ನಿ ನಮ್ಮ ದೇಹದ ಅತಿಮುಖ್ಯ ಅಂಗಗಳಲ್ಲಿ ಒಂದು. ಕಾಮಾಸಕ್ತಿ ಹೆಚ್ಚಿಸಲು ಮೂತ್ರ ಪಿಂಡ ಮಹತ್ವದ ಪಾತ್ರ ವಹಿಸುತ್ತದೆ. ಕಿಡ್ನಿ ಪಾಯಿಂಟ್ ನಮ್ಮ ಪಾದದ ಮೂಳೆಯಲ್ಲಿರುತ್ತದೆ. ಈ ಪಾಯಿಂಟ್  ಗೆ ಬೆರಳಿನ ಸಹಾಯದಿಂದ ಪ್ರೆಸ್ ಮಾಡಬೇಕು. ಇದು ವಿಶ್ರಾಂತಿ ನೀಡುವ ಜೊತೆಗೆ ಕಾಮ ಹಾರ್ಮೋನ್ ಸಕ್ರಿಯವಾಗುತ್ತದೆ. ಇವುಗಳನ್ನು ಮಾಡಿಕೊಳ್ಳುವ ಮುನ್ನ ಪರಿಣಿತರ ಸಲಹೆ ಪಡೆಯುವುದು ಒಳಿತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...