alex Certify ಕಾಡುವ ಉರಿಯೂತಕ್ಕೆ ಇಲ್ಲಿದೆ ಮನೆ ಮದ್ದು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾಡುವ ಉರಿಯೂತಕ್ಕೆ ಇಲ್ಲಿದೆ ಮನೆ ಮದ್ದು

ಆಹಾರದಲ್ಲಾಗುವ ಏರುಪೇರು ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಕೆಲವೊಂದು ರೋಗಗಳಿಗೆ ಆಹಾರವೇ ಮದ್ದು. ಸರಿಯಾದ ಕ್ರಮದಲ್ಲಿ ಆಹಾರ ಸೇವನೆ ಮಾಡಿದ್ರೆ ರೋಗ ಕಡಿಮೆಯಾಗುತ್ತದೆ.

ದೇಹದಲ್ಲಿ ರಕ್ತ ಕಡಿಮೆಯಾದಲ್ಲಿ, ಹೊಟ್ಟೆಯಲ್ಲಿ ಸಮಸ್ಯೆ ಕಾಡಿದಾಗ, ಪಿತ್ತಜನಕಾಂಗದ ಅಸಮರ್ಪಕ ಕ್ರಿಯೆ ಹಾಗೆ ದೈಹಿಕ ಕೆಲಸ ಕಡಿಮೆಯಾದಾಗ ದೇಹ ಉರಿಯೂತಕ್ಕೆ ತುತ್ತಾಗುತ್ತದೆ. ಈ ಉರಿಯೂತ ಸಮಸ್ಯೆಯನ್ನು ನಿರ್ಲಕ್ಷ್ಯಿಸಲು ಸಾಧ್ಯವಿಲ್ಲ. ಉರಿಯೂತವನ್ನು ನಿರ್ಲಕ್ಷ್ಯಿಸಿದ್ರೆ ಸಮಸ್ಯೆ ದೊಡ್ಡದಾಗಿ ಬೇರೆ ರೋಗಗಳಿಗೆ ದಾರಿಯಾಗುತ್ತದೆ.

ದೇಹದಲ್ಲಿ ಉರಿಯೂತ ಉಂಟಾದ ತಕ್ಷಣ ಆಹಾರದಲ್ಲಿ ಬದಲಾವಣೆ ಮಾಡಿದ್ರೆ ಸುಲಭವಾಗಿ ಈ ರೋಗವನ್ನು ಕಡಿಮೆ ಮಾಡಬಹುದು.

ಕಲ್ಲಂಗಡಿ ಬೀಜ ಕಾಲಿನಲ್ಲಿ ಕಾಣಿಸಿಕೊಳ್ಳುವ ಉರಿಯೂತಕ್ಕೆ ಒಳ್ಳೆ ಔಷಧಿ. ಕಲ್ಲಂಗಡಿ ಬೀಜವನ್ನು ನೆರಳಿನಲ್ಲಿ ಒಣಗಿಸಿ. ನಂತ್ರ ಅದನ್ನು ಪುಡಿ ಮಾಡಿ. ಎರಡು ಚಮಚ ಕಲ್ಲಂಗಡಿ ಬೀಜವನ್ನು ನೀರಿಗೆ ಹಾಕಿ ಕುದಿಸಿ. ಕೆಲ ಗಂಟೆಗಳ ನಂತ್ರ ಇದನ್ನು ಕುಡಿಯಿರಿ. ದಿನಕ್ಕೆ ನಾಲ್ಕು ಬಾರಿ ಈ ನೀರು ಕುಡಿಯುವುದ್ರಿಂದ ಉರಿಯೂತ ಕಡಿಮೆಯಾಗುತ್ತದೆ.

ರುಚಿಯಲ್ಲಿ ಕಹಿಯಾಗಿದ್ದರೂ ಹಾಗಲಕಾಯಿ ಆರೋಗ್ಯಕ್ಕೆ ಬಹಳ ಒಳ್ಳೆಯದು. ಉರಿಯೂತಕ್ಕೆ ಇದು ಒಳ್ಳೆ ಔಷಧ. ನಾಲ್ಕು ಚಮಚ ಹಾಗಲಕಾಯಿ ರಸಕ್ಕೆ ಒಂದು ಚಮಚ ಶುಂಠಿ ಪುಡಿಯನ್ನು ಸೇರಿಸಿ ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ. ಇದ್ರಿಂದ ಉರಿಯೂತ ಕಡಿಮೆಯಾಗುತ್ತದೆ.

ಪುರಾತನ ಕಾಲದಿಂದಲೂ ಕುಂಬಳಕಾಯಿ ಔಷಧೀಯ ಗುಣ ಹೊಂದಿದೆ ಎಂದು ನಂಬಲಾಗಿದೆ. ವಿಟಮಿನ್, ಕ್ಯಾಲ್ಸಿಯಂ ಸೇರಿದಂತೆ ಆರೋಗ್ಯಕಾರಿ ಗುಣ ಹೊಂದಿರುವ ಕುಂಬಳಕಾಯಿ ಬೀಜವನ್ನು ಪುಡಿ ಮಾಡಿ ಜೇನು ತುಪ್ಪದಲ್ಲಿ ಬೆರೆಸಿ ತಿಂದಲ್ಲಿ ಉರಿಯೂತ ಕಡಿಮೆಯಾಗುತ್ತದೆ.

ಕಾಳು ಮೆಣಸು, ಅನಾನಸ್ ರಸ, ಕೊತ್ತಂಬರಿ ಎಲೆ, ಬೆಲ್ಲ ಇವೆಲ್ಲವೂ ಉರಿಯೂತವನ್ನು ಕಡಿಮೆ ಮಾಡುವ ಶಕ್ತಿ ಹೊಂದಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...