ಕಳೆದ 2 ದಿನಗಳಲ್ಲಿ ಹರಿಯಾಣದ ಗುರುಗ್ರಾಮ್ ಜಿಲ್ಲೆಯಲ್ಲಿ ಕಳುವಾಗಿದ್ದ ಸುಮಾರು 18 ಲಕ್ಷ ರೂಪಾಯಿ ಮೌಲ್ಯದ ಕನಿಷ್ಟ 100 ಸ್ಮಾರ್ಟ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು ಅವುಗಳ ಮಾಲೀಕರಿಗೆ ಹಿಂತಿರುಗಿಸಲಾಗಿದೆ.
ಪತ್ತೆಯಾದ ಈ ಮೊಬೈಲ್ ಫೋನ್‌ಗಳ ಒಟ್ಟು ಮೌಲ್ಯ ಸುಮಾರು 18 ಲಕ್ಷ ರೂಪಾಯಿ ಆಗಿದೆ. ಗುರುಗ್ರಾಮ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾದ ದೂರನ್ನು ಆಧರಿಸಿ ಕಾಣೆಯಾದ ಮೊಬೈಲ್ ಫೋನ್‌ಗಳನ್ನು ಪಡೆಯಲು ಪೊಲೀಸರ ತಂಡವು ವಿವಿಧ ರಾಜ್ಯಗಳಾದ ರಾಜಸ್ಥಾನ, ಪಂಜಾಬ್, ಉತ್ತರ ಪ್ರದೇಶ, ದೆಹಲಿ , ಬಿಹಾರ ಹಾಗೂ ಹರಿಯಾಣದ ಕೆಲ ಭಾಗಗಳಿಗೆ ತೆರಳಿದ್ದರು ಎಂದು ಪೊಲೀಸ್ ಹಿರಿಯ ಅಧಿಕಾರಿಗಳು ಹೇಳಿದರು.
ಕಳೆದ ವರ್ಷ ಸೆಪ್ಟೆಂಬರ್ ಹಾಗೂ ಡಿಸೆಂಬರ್ ನಡುವೆ ಕಳೆದುಹೋದ ಮೊಬೈಲ್ ಪ್ರಕರಣಗಳ ವರದಿಯನ್ನು ನೋಡಿದ ನಂತರ ಈ ಫೋನ್‌ಗಳನ್ನು ಪತ್ತೆ ಮಾಡಲಾಗಿದೆ.
ನಾವು ಸಾಮಾನ್ಯವಾಗಿ ಕಾಣೆಯಾದ ಫೋನ್‌ಗಳ ಅನಧಿಕೃತ ಬಳಕೆದಾರರಿಗೆ ಕರೆ ಮಾಡುತ್ತೇವೆ ಮತ್ತು ತಕ್ಷಣ ಫೋನ್‌ಗಳನ್ನು ಹಿಂತಿರುಗಿಸುವಂತೆ ಕೇಳುತ್ತೇವೆ. ಎಫ್‌ಐಆರ್‌ನ ಸಂದರ್ಭದಲ್ಲಿ, ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಹರಿಯಾಣದ ಪೊಲೀಸ್ ಉಪ ಆಯುಕ್ತ (ಪಶ್ಚಿಮ) ದೀಪಕ್ ಸಹರನ್ ಹೇಳಿದ್ದಾರೆ.