ಹಾಲು ಕುಡಿಯುವ ಮಕ್ಕಳಿಗೆ ಅದರೊಂದಿಗೆ ಸಕ್ಕರೆ ಬದಲು ಕಲ್ಲು ಸಕ್ಕರೆ ಬಳಸಿ ಕೊಡುವುದನ್ನು ನೀವು ಗಮನಿಸಿರಬಹುದು. ಇದಕ್ಕೆ ಮುಖ್ಯ ಕಾರಣ ಇದರಲ್ಲಿರುವ ಖನಿಜಾಂಶಗಳು. ಸಕ್ಕರೆ ಮತ್ತು ಬೆಲ್ಲದಲ್ಲಿರುವ ಸತ್ವಕ್ಕಿಂತ ಹೆಚ್ಚಿನ ಉತ್ತಮ ಗುಣಗಳು ಕಲ್ಲುಸಕ್ಕರೆಯಲ್ಲಿವೆ.
ಇದರ ತಯಾರಿ ವೇಳೆ ಕೆಮಿಕಲ್ಸ್ ಬಳಸುವುದಿಲ್ಲ, ಹಾಗೂ ಇದನ್ನು ರಿಫೈನ್ ಮಾಡಲಾಗುವುದಿಲ್ಲ. ಹಾಗಾಗಿ ಮಧುಮೇಹಿಗಳು ನಿಯಮಿತ ಪ್ರಮಾಣದಲ್ಲಿ ಇದನ್ನು ಸೇವಿಸಬಹುದು. ಮಕ್ಕಳಿಗೆ ಕೆಮ್ಮು ಮೊದಲಾದ ಸಮಸ್ಯೆ ಉಂಟಾದಾಗ ಬಿಸಿನೀರಿಗೆ ಕಲ್ಲುಸಕ್ಕರೆ ಹಾಕಿ ಕರಗಿಸಿ ಬೆಚ್ಚಗಿರುವಂತೆಯೇ ಕುಡಿಸಿದರೆ ಕೆಮ್ಮಿನ ಸಮಸ್ಯೆ ದೂರವಾಗುತ್ತದೆ.
ನಾರಿನಂಶ ಇರುವ ಕಲ್ಲುಸಕ್ಕರೆಯನ್ನು ಆಯುರ್ವೇದ ಮಳಿಗೆಗಳಿಂದಲೇ ಕೊಂಡು ತರುವುದು ಒಳ್ಳೆಯದು. ಪಿತ್ತ ಸಮಸ್ಯೆಯಿಂದ ಬಳಲುವವರು ಅದರ ಪರಿಹಾರಕ್ಕೆ ಕಲ್ಲುಸಕ್ಕರೆಯನ್ನು ಬಳಸಬಹುದು. ಚಿಕ್ಕ ಗಾತ್ರದ ಕಲ್ಲುಸಕ್ಕರೆಗೆ ಪಾಲಿಶ್ ಮಾಡುವುದರಿಂದ ಇದರ ಉತ್ತಮ ಗುಣಗಳು ನಾಶವಾಗುತ್ತವೆ. ಹಾಗಾಗಿ ನೀವು ಕೊಳ್ಳುವಾಗ ದೊಡ್ಡ ಗಾತ್ರ ಕಲ್ಲುಸಕ್ಕರೆಯನ್ನೇ ಕೊಳ್ಳಿ.