ಬೆಳಗಾವಿ: ಬೆಳಗಾವಿಯಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡ ಬೆನ್ನಲ್ಲೇ ಮುಂಜಾಗೃತಾ ಕ್ರಮವಾಗಿ ಕರ್ನಾಟಕ – ಮಹಾರಾಷ್ಟ್ರ ಮಧ್ಯೆ ಬಸ್ ಸಂಚಾರ ಬಂದ್ ಮಾಡಲಾಗಿದೆ.
ಗಡಿ ಜಿಲ್ಲೆ ಬೆಳಗಾವಿಯಲ್ಲಿ ಎಂಇಎಸ್ ಪುಂಡಾಟ, ಶಿವಸೇನೆ ಕಾರ್ಯಕರ್ತರಿಂದ ಕನ್ನಡಿಗರ ಮೇಲೆ ದಾಳಿ ಹಿನ್ನೆಲೆಯಲ್ಲಿ ಉಭಯ ರಾಜ್ಯಗಳ ನಡುವೆ ಬಸ್ ಸಂಚಾರವನ್ನು ತಾತ್ಕಾಲಿಕ ಸ್ಥಗಿತಗೊಳಿಸಲಾಗಿದೆ.
ಇಲ್ಲಿದೆ ʼಗಂಗಾ ಎಕ್ಸ್‌ಪ್ರೆಸ್ ವೇʼ ಕುರಿತ ಆಸಕ್ತಿಕರ ಅಂಶಗಳು
ಮೀರಜ್ ನಲ್ಲಿ ಕನ್ನಡಿಗರ ಹೋಟೆಲ್, ಅಂಗಡಿಗಳು, ಕರ್ನಾಟಕದ ವಾಹನಗಳ ಮೇಲೆ ಶಿವಸೇನೆ ಕಾರ್ಯಕರ್ತರು ಕಲ್ಲು ತೂರಾಟ ನಡೆಸಿ ಉದ್ಧಟತನ ಮೆರೆಯುತ್ತಿದ್ದು, ಪರಿಸ್ಥಿತಿ ಇನ್ನಷ್ಟು ವಿಕೋಪಕ್ಕೆ ತಿರುಗುವುದನ್ನು ತಡೆಯುವ ನಿಟ್ಟಿನಲ್ಲಿ ಬಸ್ ಸಂಚಾರ ಬಂದ್ ಮಾಡಲಾಗಿದೆ.
ರಾಜ್ಯದಿಂದ ಯಾವುದೇ ಬಸ್ ಮಹಾರಾಷ್ಟ್ರಕ್ಕೆ ಪ್ರವೇಶಿಸುತ್ತಿಲ್ಲ. ಇನ್ನು ಮಹಾರಾಷ್ಟ್ರದಿಂದ ಯಾವುದೇ ಬಸ್ ರಾಜ್ಯಕ್ಕೆ ಪ್ರವೇಶಿಸುತ್ತಿಲ್ಲ. ಎರಡೂ ರಾಜ್ಯಗಳ ಬಸ್ ಗಳು ನಿಪ್ಪಾಣಿ ಗಡಿಯವರೆಗೆ ಮಾತ್ರ ತೆರಳುತ್ತಿವೆ. ಇನ್ನು ಬಸ್ ಸಂಚಾರ ಬಂದ್ ಹಿನ್ನೆಲೆಯಲ್ಲಿ ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.