alex Certify ಕರ್ನಾಟಕ ನೋಡಬಯಸುವ ಪ್ರವಾಸಿಗರಿಗಾಗಿ ಹೊಸ ಯೋಜನೆ: ಒಂದೇ ಟಿಕೆಟ್‌ನಲ್ಲಿ ಸಂಪೂರ್ಣ ಪ್ಯಾಕೇಜ್‌ ಬುಕ್ಕಿಂಗ್‌ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕರ್ನಾಟಕ ನೋಡಬಯಸುವ ಪ್ರವಾಸಿಗರಿಗಾಗಿ ಹೊಸ ಯೋಜನೆ: ಒಂದೇ ಟಿಕೆಟ್‌ನಲ್ಲಿ ಸಂಪೂರ್ಣ ಪ್ಯಾಕೇಜ್‌ ಬುಕ್ಕಿಂಗ್‌

ಕರ್ನಾಟಕದಲ್ಲಿ ಸುತ್ತಾಡಲು ಬಯಸುವ ವಿದೇಶಿ ಮತ್ತು ದೇಶೀ ಪ್ರವಾಸಿಗರು ಇನ್ನೊಂದು ತಿಂಗಳಲ್ಲಿ ತಾವಿರುವ ಸ್ಥಳಗಳಿಂದಲೇ ಸಂಪೂರ್ಣ ಪ್ಯಾಕೇಜ್‌ಗಳನ್ನು ಯಾವುದೆ ಅಡೆತಡೆಗಳಿಲ್ಲದೆ ಬುಕ್ ಮಾಡಬಹುದು.  ರಾಜ್ಯದ ವಿವಿಧ ಸ್ಥಳಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆ ಯೋಜನೆ ರೂಪಿಸಿದೆ. ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಹಿತಿ ನೀಡಿದ್ದಾರೆ.

ಈ ಯೋಜನೆಯು ಪ್ರವಾಸಿಗರಿಗೆ ಒಂದೇ ಟಿಕೆಟ್ ಅನ್ನು ಬುಕ್ ಮಾಡಲು ಅನುವು ಮಾಡಿಕೊಡುತ್ತದೆ. ಇದು ವಿಮಾನ ಬುಕಿಂಗ್, ಗಮ್ಯಸ್ಥಾನ ಭೇಟಿ, ಮಾರ್ಗದರ್ಶಿಗಳು ಮತ್ತು ಊಟ-ಉಪಹಾರ ಎಲ್ಲವನ್ನೂ ಒಳಗೊಂಡಿರುತ್ತದೆ. ಇದನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ ಜಾರಿಗೊಳಿಸಲಾಗುವುದು ಎಂದು ಸಿಎಂ ತಿಳಿಸಿದ್ದಾರೆ.

ವಿಶ್ವ ಪ್ರವಾಸೋದ್ಯಮ ದಿನಾಚರಣೆಯ ಅಂಗವಾಗಿ 2026ರ ಪರಿಷ್ಕೃತ ಪ್ರವಾಸೋದ್ಯಮ ನೀತಿಯನ್ನು ಬಿಡುಗಡೆ ಮಾಡಿ ಮಾತನಾಡಿದ ಬೊಮ್ಮಾಯಿ, ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಕೆಎಸ್‌ಟಿಡಿಸಿ) ಒನ್-ಟಿಕೆಟ್ ಸರ್ಕ್ಯೂಟ್ ಅನ್ನು ಪ್ರಾರಂಭಿಸಲು ಸಿದ್ಧತೆ ನಡೆಸಿದೆ. ಪ್ರವಾಸೋದ್ಯಮ ಇಲಾಖೆಯು ಉತ್ತರ (ಹಂಪಿ ಮತ್ತು ಸುತ್ತಮುತ್ತಲ) ಮತ್ತು ದಕ್ಷಿಣ (ಮೈಸೂರು ಮತ್ತು ಸುತ್ತಮುತ್ತಲಿನ) ಎರಡು ಸರ್ಕ್ಯೂಟ್‌ಗಳನ್ನು ಸಿದ್ಧಪಡಿಸ್ತಾ ಇದೆ ಎಂದರು.

ಇಲಾಖೆಯು ಇನ್ನಷ್ಟು ಆಕ್ರಮಣಕಾರಿಯಾಗಬೇಕೆಂದು ಒತ್ತಾಯಿಸಿದ ಸಿಎಂ, ಪ್ರವಾಸಿಗರನ್ನು ಸೆಳೆಯಲು ಇಲಾಖೆಯು ಇನ್ನು ಮುಂದೆ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ (ಯುನೆಸ್ಕೋ) ಘೋಷಿತ ತಾಣಗಳನ್ನು ಅವಲಂಬಿಸಬಾರದು ಎಂದು ಹೇಳಿದರು. ಕರ್ನಾಟಕದಲ್ಲಿ ಅನೇಕ ಪುರಾತತ್ವ ಇತಿಹಾಸವಿರುವ ಸ್ಥಳಗಳಿವೆ. ಅವುಗಳನ್ನು ಜನಪ್ರಿಯಗೊಳಿಸುವುದು, ಸೌಲಭ್ಯಗಳನ್ನು ಸುಧಾರಿಸುವುದು ಮತ್ತು ಮಾರುಕಟ್ಟೆಯನ್ನು ಆಕ್ರಮಣಕಾರಿಯಾಗಿ ಮಾಡುವುದು ಅಗತ್ಯ ಎಂದವರು ಅಭಿಪ್ರಾಯಪಟ್ಟರು.

ಸ್ಥಳಗಳ ಇತಿಹಾಸವನ್ನು ವಿವರಿಸಲು ತಜ್ಞರನ್ನು ಸಂಪರ್ಕಿಸಬೇಕು ಎಂದು ಸಲಹೆ ನೀಡಿದ್ರು. ಕಂದಾಯ, ಪಿಡಬ್ಲ್ಯುಡಿ, ರಸ್ತೆಗಳು ಮತ್ತು ಮೂಲಸೌಕರ್ಯ ಸೇರಿದಂತೆ ಎಲ್ಲ ಇಲಾಖೆಗಳು ಪ್ರವಾಸೋದ್ಯಮ ಇಲಾಖೆಯೊಂದಿಗೆ ಕೆಲಸ ಮಾಡಬೇಕು ಎಂದು ಅವರು ಪ್ರತಿಪಾದಿಸಿದರು. ಅಂಜನಾದ್ರಿ ಬೆಟ್ಟ, ನಂದಿ ಬೆಟ್ಟ, ಯಾಣ ಮತ್ತು ಚಿಕ್ಕಮಗಳೂರಳಲ್ಲಿ ರೋಪ್‌ವೇ ಯೋಜನೆಗಳನ್ನು ಪಿಪಿಪಿ ಅಡಿಯಲ್ಲಿ ತೆಗೆದುಕೊಳ್ಳಲಾಗುತ್ತಿದೆ ಎಂದು ಬೊಮ್ಮಾಯಿ ಹೇಳಿದ್ದಾರೆ. ಅಂಜನಾದ್ರಿ ಬೆಟ್ಟದಲ್ಲಿ ಸೌಲಭ್ಯ ಸುಧಾರಿಸಲು ಮತ್ತು 600 ಕೊಠಡಿಗಳ ವಸತಿ ನಿಲಯವನ್ನು ನಿರ್ಮಿಸಲು 100 ಕೋಟಿ ರೂಪಾಯಿ ಮೀಸಲಿಡಲಾಗಿದೆ.

365 ನೋಂದಾಯಿತ ಮಾರ್ಗದರ್ಶಕರಿಗೆ ನೀಡುವ ಪ್ರೋತ್ಸಾಹ ಧನವನ್ನು ಮಾಸಿಕ 2,000 ರೂಪಾಯಿಗಳಿಂದ 5,000 ರೂಪಾಯಿಗೆ ಹೆಚ್ಚಿಸುವಂತೆ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಮಾಡಿದ ಪ್ರಸ್ತಾವನೆಗೆ ಸಿಎಂ ಒಪ್ಪಿಗೆ ನೀಡಿದ್ದಾರೆ. ಮಾರ್ಗದರ್ಶಕರಿಗೆ ತರಬೇತಿ, ಸಮವಸ್ತ್ರ, ಬ್ಯಾಡ್ಜ್ ಮತ್ತು ಭಾಷಾ ಕೌಶಲ್ಯ ಸುಧಾರಣೆ ತರಗತಿಗಳನ್ನು ನೀಡಲಾಗುವುದು ಎಂದು ಬೊಮ್ಮಾಯಿ ಪ್ರಕಟಿಸಿದರು. 500 ಕೋಟಿ ವೆಚ್ಚದಲ್ಲಿ ಸ್ವದೇಶ್ ದರ್ಶನ್ 2.0 ಅಡಿಯಲ್ಲಿ ಕರ್ನಾಟಕದ ಐದು ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸಚಿವ ಆನಂದ್‌ ಸಿಂಗ್ ಮಾಹಿತಿ ನೀಡಿದ್ದಾರೆ. ಕೇಂದ್ರ ಸರ್ಕಾರದ ಪರ್ವತ ಮಾಲಾ ಯೋಜನೆ ಅಡಿಯಲ್ಲಿ 15 ಸ್ಥಳಗಳಲ್ಲಿ ರೋಪ್‌ವೇ ಯೋಜನೆಗಳನ್ನು ಸಹ ಪ್ರಸ್ತಾಪಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...