alex Certify ಕರ್ನಾಟಕದ ಜಿಲ್ಲೆಗಳು ಸೀಲ್ ಆದ್ರೆ ಏನಿರುತ್ತೆ? ಏನಿರಲ್ಲ? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕರ್ನಾಟಕದ ಜಿಲ್ಲೆಗಳು ಸೀಲ್ ಆದ್ರೆ ಏನಿರುತ್ತೆ? ಏನಿರಲ್ಲ?

ದೇಶದಲ್ಲಿ ಕೊರೊನಾ ಅಬ್ಬರ ನಿಂತಿಲ್ಲ. ಕೊರೊನಾ ಸೋಂಕಿನ ನಿಯಂತ್ರಣಕ್ಕೆ ಆಯಾ ರಾಜ್ಯಗಳು ಇನ್ನಿಲ್ಲದ ಪ್ರಯತ್ನ ನಡೆಸುತ್ತಿವೆ. ಈ ಮಧ್ಯೆ ಉತ್ತರ ಪ್ರದೇಶ ಸರ್ಕಾರ 15 ಜಿಲ್ಲೆಗಳ ಲಾಕ್ ಡೌನ್ ಬಿಗಿಗೊಳಿಸಿದೆ. 15 ಜಿಲ್ಲೆಗಳನ್ನು ಸಂಪೂರ್ಣ ಸೀಲ್ ಮಾಡಿದೆ. ಕರ್ನಾಟಕದಲ್ಲೂ ಸೋಂಕಿತ ಜಿಲ್ಲೆಗಳನ್ನು ಸೀಲ್ ಮಾಡುವ ಚಿಂತನೆ ನಡೆಯುತ್ತಿದೆ. ಸೀಲ್ ಅಂದ್ರೇನು ಎಂಬುದರ ವಿವರ ಇಲ್ಲಿದೆ.

ಲಾಕ್ ಡೌನ್ ವೇಳೆ ಸಿಕ್ಕಿದ್ದ ರಿಯಾಯಿತಿಗಳು ಸೀಲ್ ಆದ್ಮೇಲೆ ಸಿಗುವುದಿಲ್ಲ.ಹಾಟ್ ಸ್ಪಾಟ್ ನಲ್ಲಿ ಪೊಲೀಸರು ಗಸ್ತು ತಿರುಗುತ್ತಿರುತ್ತಾರೆ.ಮನೆಯಿಂದ ಹೊರ ಬಂದವರ ವಿರುದ್ಧ ಕ್ರಮಕೈಗೊಳ್ಳುತ್ತಾರೆ.

ಮೊಹರು ಮಾಡಿದ ಪ್ರದೇಶವನ್ನು ನಿರಂತರವಾಗಿ ಸ್ವಚ್ಛಗೊಳಿಸಲಾಗುತ್ತದೆ. ಹಣ್ಣು,ತರಕಾರಿ,ಔಷಧಿ ನೆಪದಲ್ಲಿ ಯಾರೂ ಮನೆಯಿಂದ ಹೊರಗೆ ಬರುವಂತಿಲ್ಲ. ಸರ್ಕಾರ ಆಯಾ ಪ್ರದೇಶಕ್ಕೆ ಸಹಾಯವಾಣಿ ನೀಡಿರುತ್ತದೆ. ಅದಕ್ಕೆ ಕರೆ ಮಾಡಿ ಜನರು ಬೇಕಾದ ಸಾಮಗ್ರಿ ತರಿಸಿಕೊಳ್ಳಬಹುದು.

ಪೊಲೀಸರು,ಅಗ್ನಿಶಾಮಕ ಸಿಬ್ಬಂದಿ ಹಾಗೂ ಆರೋಗ್ಯ ಸಿಬ್ಬಂದಿಗೆ ಮಾತ್ರ ಓಡಾಡಲು ಅವಕಾಶವಿರುತ್ತದೆ. ಅದು ಪಾಸ್ ತೋರಿಸಿ ಸೂಕ್ತ ಸ್ಥಳಕ್ಕೆ ಹೋಗಬಹುದು.

ಬ್ಯಾಂಕ್,ಪಡಿತರ ಅಂಗಡಿಗಳು ಮುಚ್ಚಲ್ಪಡುತ್ತವೆ. ಲಾಕ್‌ಡೌನ್ ಸಮಯದಲ್ಲಿ ನೀಡಿದ್ದ ಪಾಸ್ ರದ್ದಾಗಲಿದೆ.  ಅಗತ್ಯವಿದ್ದಾಗ ಮಾತ್ರ ಆಂಬ್ಯುಲೆನ್ಸ್ ಮೊಹರು ಪ್ರದೇಶಗಳಲ್ಲಿ ಪ್ರವೇಶ ಪಡೆಯಬಹುದು.

ಹಾಟ್ ಸ್ಪಾಟ್ ಪ್ರದೇಶಕ್ಕೆ ಮಾಧ್ಯಮದವರ ಪ್ರವೇಶ ನಿಷಿದ್ಧ. ಅಲ್ಲಿ ಅವರ ಮನೆಯಿದ್ದರೆ ಅವರು ಕಚೇರಿಗೆ ಹೋಗಲು ಅವಕಾಶ ನೀಡಲಾಗುತ್ತದೆ. ಮನೆಯಿಂದ ಹೊರ ಬರುವ ಪ್ರತಿಯೊಬ್ಬ ವ್ಯಕ್ತಿಗೂ ಮಾಸ್ಕ್ ಕಡ್ಡಾಯವಾಗಿರಲಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...