
2019ರಲ್ಲಿ ಹುತಾತ್ಮರಾಗಿದ್ದ ಮೇಜರ್ ಕೆಪಿಎಸ್ ಕಹ್ಲೋನ್ ಅವರ ಪತ್ನಿ ಹರ್ವಿನ್ ಕೌರ್ ಸೇನೆಗೆ ಸೇರ್ಪಡೆಗೊಂಡಿದ್ದು, ಚೆನ್ನೈನ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿಯಲ್ಲಿ ಇವರು ತರಬೇತಿ ಪಡೆದಿದ್ದರು.
ಪತಿ ಅಗಲಿಕೆಯ ನಂತರ ಸೇನೆ ಸೇರ್ಪಡೆಯಾಗುವ ನಿರ್ಧಾರ ಕೈಗೊಂಡಿದ್ದ ಇವರು, ಚೆನ್ನೈನ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿಯಲ್ಲಿ 11 ತಿಂಗಳ ಕಠಿಣ ತರಬೇತಿ ಪಡೆದಿದ್ದರು. ಇದೀಗ ಭಾರತೀಯ ಸೇನೆಯಲ್ಲಿ ಅಧಿಕಾರಿಯಾಗಿ ನೇಮಕಗೊಂಡಿದ್ದು, ದೇಶ ಸೇವೆಗೆ ಸಜ್ಜಾಗಿದ್ದಾರೆ.