ಕರೋನಾ ವೈರಸ್ ಸದ್ಯ ಎಲ್ಲರಲ್ಲೂ ಭಯ ಹುಟ್ಟಿಸಿದೆ. ವೈರಸ್ ವಿರುದ್ಧ ಹೋರಾಡಲು ಸ್ವಚ್ಛತೆ ಬಹಳ ಮುಖ್ಯ. ಸೋಪ್ ಅಥವಾ ಸ್ಯಾನಿಟೈಸರ್ ನಿಂದ ಕೈ ತೊಳೆಯಬೇಕೆಂದು ಸಲಹೆ ನೀಡಲಾಗ್ತಿದೆ. ಆದ್ರೀಗ ವೈರಸ್ ವಿರುದ್ಧ ಹೋರಾಡಲು ಸೋಪ್ ಮತ್ತು ಸ್ಯಾನಿಟೈಜರ್ ನಲ್ಲಿ ಯಾವುದು ಉತ್ತಮ ಎಂಬ ಬಗ್ಗೆ ಗೊಂದಲವಿದೆ.
ಕರೋನಾ ವೈರಸ್ ತಪ್ಪಿಸಲು ಸಾಬೂನು ಉತ್ತಮ ಆಯ್ಕೆಯಾಗಿದೆ ಎಂದು ಸೌತ್ ವೇಲ್ಸ್ ವಿಶ್ವವಿದ್ಯಾಲಯದ ಪ್ರೊಫೆಸರ್ ಪಾಲ್ ಥಾರ್ಡಾರ್ಸನ್ ಬಣ್ಣಿಸಿದ್ದಾರೆ. ಸೋಪ್ ವೈರಸ್ ನಲ್ಲಿರುವ ಲಿಪಿಡ್ ಗಳನ್ನು ಸುಲಭವಾಗಿ ತೆಗೆದು ಹಾಕುತ್ತದೆ. ಸಾಬೂನು ಕೊಬ್ಬಿನಾಮ್ಲಗಳು ಮತ್ತು ಆಂಫಿಫೈಲ್ಸ್ ಎಂಬ ಉಪ್ಪಿನಂತಹ ಅಂಶಗಳನ್ನು ಹೊಂದಿರುತ್ತದೆ. ಸೋಪಿನಲ್ಲಿರುವ ಈ ಗುಪ್ತ ಅಂಶಗಳು ವೈರಸ್‌ನ ಹೊರ ಪದರವನ್ನು ತಟಸ್ಥಗೊಳಿಸುತ್ತದೆ ಎಂದು ತಜ್ಞರು ಹೇಳಿದ್ದಾರೆ.
ಸುಮಾರು 20 ನಿಮಿಷಗಳ ಕಾಲ ಸಾಬೂನಿನಲ್ಲಿ ಕೈ ತೊಳೆಯುವುದ್ರಿಂದ ಕೈ ಒರಟಾಗುತ್ತದೆ. ಸೋಪ್ ಸಾಕಷ್ಟು ಆಳಕ್ಕೆ ಹೋಗಿ ರೋಗಾಣುಗಳನ್ನು ಕೊಲ್ಲುವುದು ಇದಕ್ಕೆ ಕಾರಣ. ಸ್ಯಾನಿಟೈಸರ್ ನಲ್ಲಿ ಆಲ್ಕೋಹಾಲ್ ಮಾತ್ರ ಇರುವುದ್ರಿಂದ ಅದು ಸಾಬೂನಿನಷ್ಟು ಪರಿಣಾಮಕಾರಿಯಲ್ಲ.