ಒಗ್ಗರಣೆಗೆ ಹಾಕಿದಾಕ್ಷಣ ಚುಯ್ ಎಂದು ಸದ್ದು ಮಾಡಿ ಘಮ್ಮನೆ ಸುವಾಸನೆ ಬೀರುವ ಕರಿಬೇವು ಸೌಂದರ್ಯವನ್ನು ಕಾಪಾಡುತ್ತದೆ. ಹೇಗೆಂದಿರಾ.
ಇದರಲ್ಲಿ ಹೆಚ್ಚಿನ ಪ್ರಮಾಣದ ನ್ಯೂಟ್ರಿನ್ ಮತ್ತು ವಿಟಮಿನ್ಗಳಿದ್ದು ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಇದರಲ್ಲಿರುವ ಅಮಿನೊ ಆಮ್ಲಗಳು ಕೂದಲು ಉದುರುವಿಕೆಯನ್ನು ಕಡಿಮೆ ಮಾಡುತ್ತವೆ.
ಕರಿಬೇವಿಗೆ ಮೊಸರು ಹಾಕಿ ಪೇಸ್ಟ್ ತಯಾರಿಸಿ. ಕೂದಲಿನ ಬುಡಕ್ಕೆ ಹಚ್ಚಿ. ವಾರಕ್ಕೆರಡು ಬಾರಿ ಹೀಗೆ ಮಾಡುವುದರಿಂದ ಕೂದಲು ಉದುರುವುದು ಕಡಿಮೆಯಾಗುತ್ತದೆ.
ಇದನ್ನು ಹಾಲಿನೊಂದಿಗೆ ಬೆರೆಸಿ ಹಚ್ಚಿ ಕೊಳ್ಳುವುದರಿಂದ ಕೂದಲು ಬೆಳ್ಳಗಾಗುವುದನ್ನು ತಪ್ಪಿಸಬಹುದು. ಆಲಿವ್ ಆಯಿಲ್ ಗೆ ಕರಿಬೇವು ಸೇರಿಸಿ ಹಚ್ಚಿಕೊಂಡರೆ ಕೂದಲ ನರೆತ ಕಡಿಮೆಯಾಗುತ್ತದೆ.