alex Certify ಕಮಲಶಿಲೆಯಲ್ಲಿ ನೆಲೆ ನಿಂತ ಬ್ರಾಹ್ಮೀ ದುರ್ಗಾ ಪರಮೇಶ್ವರಿ ದರ್ಶನ ಪಡೆಯಿರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಮಲಶಿಲೆಯಲ್ಲಿ ನೆಲೆ ನಿಂತ ಬ್ರಾಹ್ಮೀ ದುರ್ಗಾ ಪರಮೇಶ್ವರಿ ದರ್ಶನ ಪಡೆಯಿರಿ

ಕಮಲಶಿಲೆ ಕುಂದಾಪುರದಿಂದ ಸುಮಾರು 35 ಕಿ.ಮೀ.ದೂರದಲ್ಲಿದೆ. ಬ್ರಾಹ್ಮೀ ದುರ್ಗಾ ಪರಮೇಶ್ವರಿ ಇಲ್ಲಿನ ಮುಖ್ಯ ದೇವತೆ. ಇಲ್ಲಿ ದುರ್ಗೆ ಲಿಂಗ ರೂಪಿಯಾಗಿ ನೆಲೆಸಿದ್ದಾಳೆ.

ಲಿಂಗದಲ್ಲಿ ಮೂರು ಸ್ವರ್ಣ ರೇಖೆಗಳಿದ್ದು ಮಹಾಲಕ್ಷ್ಮೀ, ಮಹಾಕಾಳಿ ಹಾಗೂ ಮಹಾಸರಸ್ವತಿ ಐಕ್ಯವಾಗಿದ್ದಾರೆ ಎನ್ನಲಾಗಿದೆ. ದೇವಳವು ಕುಬ್ಜಾ ನದಿ ಹಾಗೂ ನಾಗತೀರ್ಥಗಳ ಸಂಗಮ ಕ್ಷೇತ್ರವಾಗಿದೆ.

ಕಮಲಶಿಲೆಯಿಂದ ಸುಮಾರು 2 ಕಿ.ಮೀ. ದೂರದಲ್ಲಿ ಆದಿಸ್ಥಳ ಗುಹಾಲಯವಿದೆ. ಇಲ್ಲಿ ಹುಲಿಚಾವಡಿ, ಸಪ್ತಾರ್ಶ್ವ ಗುಹೆ, ಮಹಾಕಾಳಿ, ಮಹಾಲಕ್ಷ್ಮಿ, ಮಹಾಸರಸ್ವತಿಯ ಉದ್ಭವ ಲಿಂಗಗಳಿವೆ.

ಗುಹೆಯೊಳಗೆ ಸಂಪೂರ್ಣ ಕತ್ತಲಿರುವುದರಿಂದ ಒಳ ಹೋಗುವವರು ಟಾರ್ಚ್ ಹಿಡಿದೇ ಹೋಗಬೇಕು. ಸಿದ್ದಾಪುರದಿಂದ ಆರು ಕಿ.ಮೀ. ಮತ್ತು ಕುಂದಾಪುರದಿಂದ 35 ಕಿ.ಮೀ ದೂರವಿರುವ ಕಮಲಶಿಲೆಗೆ ಹೋಗಲು ಬಸ್ ವ್ಯವಸ್ಥೆ ಇದೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...