alex Certify ಕನ್ನ ಹಾಕಿದ ಮನೆಯಲ್ಲೆ ಖಿಚಡಿ ಬೇಯಿಸಲು ಹೋಗಿ ಪೊಲೀಸರ ಅತಿಥಿಯಾದ ಕಳ್ಳ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕನ್ನ ಹಾಕಿದ ಮನೆಯಲ್ಲೆ ಖಿಚಡಿ ಬೇಯಿಸಲು ಹೋಗಿ ಪೊಲೀಸರ ಅತಿಥಿಯಾದ ಕಳ್ಳ..!

ಬೆಲೆಬಾಳುವ ವಸ್ತುಗಳನ್ನು ಕದಿಯಲು ಮನೆಯೊಂದಕ್ಕೆ ನುಗ್ಗಿದ ಕಳ್ಳನೊಬ್ಬ ಕಳ್ಳತನದ ನಡುವೆಯೇ ಖಿಚಡಿ ಬೇಯಿಸಿ ತಿನ್ನಲು ಹೋಗಿ ಪೊಲೀಸರ ಬಲೆಗೆ ಬಿದ್ದ ಘಟನೆ ನಡೆದಿದೆ. ಅಸ್ಸಾಂನ ಗುವಾಹಟಿಯಲ್ಲಿ ಸೋಮವಾರ ರಾತ್ರಿ ಈ ಅಸಹಜ ಹಾಸ್ಯಾಸ್ಪದ ಹಾಗೂ ವಿನೋದಕರ ಘಟನೆ ನಡೆದಿದೆ.

ಮನೆಮಾಲೀಕರು ಇಲ್ಲದಿದ್ದಾಗ ಕಳ್ಳನು ಗೌಹಾಟಿಯ ಹೆಂಗೇರಾಬರಿ ಪ್ರದೇಶದಲ್ಲಿರುವ ಮನೆಯೊಂದಕ್ಕೆ ನುಗ್ಗಿದ್ದಾನೆ. ಆತನಿಗೆ ಅದೇನು ಅನಿಸಿತೊ, ಕಳ್ಳತನದ ನಡುವೆಯೆ ಅಡುಗೆ ಮನೆಗೆ ಹೋಗಿ ಖಿಚಡಿ ತಯಾರಿಸಲು ಶುರು ಮಾಡಿದ್ದಾನೆ.‌ ಅಡುಗೆ ಮನೆಯ ವಿಚಿತ್ರ ಶಬ್ಧ ಕೇಳಿಸಿಕೊಂಡ ಅಕ್ಕಪಕ್ಕದ ಮನೆಯವರಿಗೆ ಎಚ್ಚರವಾಗಿದೆ. ಮನೆಯಲ್ಲಿ ಮಾಲೀಕರು ಇಲ್ಲದಿರುವುದನ್ನು ತಿಳಿದ ಅವರು ಕಳ್ಳನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಈ ಬಗ್ಗೆ ಮಾಹಿತಿ ಹಂಚಿಕೊಡಿರುವ ಅಸ್ಸಾಂ ಪೊಲೀಸರು, ಘಟನೆಯ ವಿವರಗಳನ್ನು ನೀಡಿದ್ದಾರೆ. ಖಿಚಡಿ ಕಳ್ಳನ ಕುತೂಹಲಕಾರಿ ಪ್ರಕರಣ!, ಅನೇಕ ಆರೋಗ್ಯ ಪ್ರಯೋಜನಗಳ ಹೊರತಾಗಿಯೂ, ಕಳ್ಳತನದ ಪ್ರಯತ್ನದ ಸಮಯದಲ್ಲಿ ಖಿಚಡಿಯನ್ನು ಬೇಯಿಸುವುದು ನಿಮ್ಮ ಯೋಗಕ್ಷೇಮಕ್ಕೆ ಹಾನಿಯನ್ನುಂಟುಮಾಡುತ್ತದೆ.

ಖಿಚಡಿ ಕಳ್ಳನನ್ನ ಬಂಧಿಸಿ ಗೌಹಾಟಿ ಪೊಲೀಸರು, ಬಿಸಿ ಬಿಸಿ ಊಟ ನೀಡುತ್ತಿದ್ದಾರೆ ಎಂಬ ಶೀರ್ಷಿಕೆ ನೀಡಿ ಟ್ವೀಟ್ ಮಾಡಿದ್ದಾರೆ. ಜೊತೆಗೆ ಕಳ್ಳನನ್ನ ಬಂಧಿಸಿರುವುದನ್ನ ತಿಳಿಸಿದ್ದಾರೆ. ಈ ಟ್ವೀಟ್ ವೈರಲ್ ಆಗಿದ್ದು, ಟ್ವಿಟ್ಟರ್ ಬಳಕೆದಾರರನ್ನು ರಂಜಿಸುತ್ತಿದೆ. ಕೆಲವರು ಅಸ್ಸಾಂ ಪೊಲೀಸರ ಹಾಸ್ಯದ ಟ್ವೀಟ್ ಅನ್ನು ಶ್ಲಾಘಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...