10-11ನೇ ಶತಮಾನದಲ್ಲಿ ನಿರ್ಮಿಸಲಾಗಿದೆ ಎನ್ನಲಾದ ಮಂಗಳೂರಿನ ಕದ್ರಿ ಶ್ರೀ ಮಂಜುನಾಥ ದೇವಸ್ಥಾನ, ಕರಾವಳಿಯ ಪ್ರಸಿದ್ಧ ಪ್ರವಾಸಿ ತಾಣ ಹಾಗು ಭಕ್ತಿ ಕೇಂದ್ರ. ಇದು ದಕ್ಷಿಣ ಭಾರತದಲ್ಲೇ ಅತಿ ಪುರಾತನವಾದುದು ಎಂದು ಹೇಳಲಾಗಿದೆ.
ಅಪ್ಪಿತಪ್ಪಿಯೂ ಗೂಗಲ್ ನಲ್ಲಿ ಈ ಶಬ್ಧವನ್ನು ಸರ್ಚ್ ಮಾಡ್ಬೇಡಿ….!
ಕ್ಷತ್ರಿಯರನ್ನು ಪರಶುರಾಮ ನಾಶ ಮಾಡಿ ಭೂಮಿಯನ್ನು ಕಶ್ಯಪನಿಗೆ ದಾನ ಮಾಡಿದನಂತೆ. ಬಳಿಕ ಭಗವಂತ ಶಿವನನ್ನು ಪ್ರಾರ್ಥಿಸಿ ವಾಸಿಸಲು ನೆಲೆ ಕಲ್ಪಿಸುವಂತೆ ಬೇಡಿದ. ಭಕ್ತಿಗೆ ಮೆಚ್ಚಿದ ಶಿವ ಮಂಜುನಾಥನ ರೂಪ ಪಡೆದು ಇಲ್ಲಿ ಪಾರ್ವತಿ ಸಮೇತನಾಗಿ ನೆಲೆಸಿದ ಎಂಬ ನಂಬಿಕೆ ಇದೆ.
ದೇವಸ್ಥಾನದ ಹಿಂದೆ ಮೆಟ್ಟಿಲು ಏರಿ ಹೋದರೆ ಇಲ್ಲಿ ಅಕ್ಷಯ ಪುಷ್ಕರಣಿಗಳಿವೆ. ಜೋಗಿ ಮಠ, ಹನುಮಂತನ ಮೂರ್ತಿ, ದುರ್ಗಾದೇವಿ ಮಂದಿರ, ರಾಮಲಕ್ಷ್ಮಣ ತೀರ್ಥ ಹೀಗೆ ಹಲವಾರು ಪುರಾಣದ ಕತೆಗಳನ್ನು ಹೇಳುವ ಚಾರಿತ್ರಿಕ ಸ್ಥಳಗಳಿವೆ. ಇಲ್ಲಿ ಕಾರ್ತಿಕ ಮಾಸದಂದು ದೀಪೋತ್ಸವ ನಡೆಯುತ್ತದೆ.
ಸುರಕ್ಷತೆ ವಿಷ್ಯದಲ್ಲಿ ದಾಖಲೆ ಬರೆದ ಎಕ್ಸ್ ಯುವಿ 700
ದೇವಸ್ಥಾನದ ಪಶ್ಚಿಮಕ್ಕೆ ದುರ್ಗಾದೇವಿ ದೇವಸ್ಥಾನ, ಉತ್ತರಕ್ಕೆ ಗಣಪತಿ ದೇವಸ್ಥಾನ ಇದೆ. ಇಲ್ಲಿ ವರ್ಷಪೂರ್ತಿ ಹಬ್ಬ ಉತ್ಸವಗಳು ನಡೆಯುತ್ತಿರುತ್ತವೆ. ದೇವಸ್ಥಾನವು ನಗರದ ಮಧ್ಯಭಾಗದಿಂದ 5 ಕಿ.ಮೀ. ದೂರದಲ್ಲಿದೆ. ಮಂಗಳೂರು ವಿಮಾನ ನಿಲ್ದಾಣದಿಂದ 15 ಕಿ.ಮೀ ದೂರದಲ್ಲಿದೆ. ನವರಾತ್ರಿ, ಕಾರ್ತಿಕ ಸೋಮವಾರ, ಲಕ್ಷ ದೀಪೋತ್ಸವ, ಧನುಪೂಜೆ, ಮಹಾಶಿವರಾತ್ರಿ, ಮತ್ತಿತರ ಪೂಜೆ, ಉತ್ಸವಗಳು ನಡೆಯುತ್ತವೆ.