ಎಲ್ಲಿ ಧನಾತ್ಮಕ ಶಕ್ತಿ ಇರುತ್ತದೆಯೋ, ಋಣಾತ್ಮಕ ಶಕ್ತಿಯೂ ಇರುತ್ತದೆ ಅನ್ನೋದು ಆಸ್ತಿಕರ ನಂಬಿಕೆಯಾಗಿದೆ. ಪ್ರಪಂಚದೆಲ್ಲೆಡೆ ದೆವ್ವದ ಪರಿಕಲ್ಪನೆಯಿದೆ. ಇನ್ನು ಹಲವಾರು ಮಂದಿ ದೆವ್ವಗಳನ್ನು ನಂಬೋದಿಲ್ಲ. ಒಂದು ವೇಳೆ ನೀವು ದೆವ್ವಗಳನ್ನು ನಂಬದಿದ್ದರೆ. ಈ ಸ್ಟೋರಿ ಓದಿದ ನಂತರ ನಿಮ್ಮ ಮನಸ್ಸನ್ನು ಬದಲಾಯಿಸಬಹುದು.
ಹೌದು, ಲೈವ್‌ಸ್ಟ್ರೀಮ್‌ನಲ್ಲಿ ಲಿಂಕನ್‌ಶೈರ್‌ನ ಪ್ರೇತಗಳ ತುಣುಕನ್ನು ಕ್ಯಾಮರಾದಲ್ಲಿ ಸೆರೆಹಿಡಿದಿದ್ದೇವೆ ಎಂದು ಯುಕೆಯ ದೆವ್ವ ಹುಡುಕಾಟದ ತಂಡವು ಹೇಳಿಕೊಂಡಿದೆ. ರೆಟ್‌ಫೋರ್ಡ್ ಘೋಸ್ಟ್ ಹಂಟರ್‌ಗಳು ನಿಷ್ಕ್ರಿಯಗೊಂಡ ಆರ್ ಎ ಎಫ್ ಮೆಥರಿಂಗ್‌ಹ್ಯಾಮ್ ಬೇಸ್‌ನ ರಸ್ತೆಯತ್ತ ತೆರಳಿದ್ದರು. ಇದು ಕ್ಯಾಥರೀನ್ ಬೈಸ್ಟಾಕ್‌ಗೆ ನೆಲೆಯಾಗಿದೆ ಎಂದು ಕೂಡ ಹೇಳಲಾಗುತ್ತದೆ. ಇದನ್ನು ಮೆಥರಿಂಗ್‌ಹ್ಯಾಮ್ ಲಾಸ್ ಎಂದೂ ಕರೆಯುತ್ತಾರೆ. ಲೈವ್‌ಸ್ಟ್ರೀಮ್ ಸಮಯದಲ್ಲಿ ಕಾರಿನ ಮುಂದೆ ಒಂದು ದೆವ್ವ ಕಾಣಿಸಿಕೊಂಡಿದೆ ಎಂದು ಹೇಳಿದ್ದಾರೆ.
ಈ ಪ್ರದೇಶದಲ್ಲಿ ದೆವ್ವದ ಸವಾರಿಯಿದೆ ಎಂದು ಹೇಳಲಾಗುತ್ತದೆ. ಘೋಸ್ಟ್ ಹಂಟರ್ ತಂಡವು ಸ್ವತಃ ಅಲ್ಲಿಗೆ ಭೇಟಿ ನೀಡಿ ಪರಿಶೀಲಿಸಲಿದೆ. ತಂಡವು ಕಾರಿನಲ್ಲಿ ಕುಳಿತಿರುವಾಗ ಕ್ಯಾಥರೀನ್ ಇಲ್ಲಿದ್ದರೆ ನಮ್ಮ ಮುಂದೆ ಕಾಣಿಸಬೇಕು ಎಂದು ಹೇಳಿದೆ. ಇದ್ದಕ್ಕಿದ್ದಂತೆ ಕಾರಿನ ದೀಪಗಳು ಆಫ್ ಆಗಿವೆ. ಮಿನುಗುವ ದೀಪಗಳು ಆಫ್ ಆಗುತ್ತಿದ್ದಂತೆ ದೆವ್ವವು ಘೋಸ್ಟ್ ಹಂಟರ್ ತಂಡದ ಎದುರು ಕಾಣಿಸಿಕೊಂಡಿದ್ದಾಗಿ ಹೇಳಿದೆ. ಕೂಡಲೇ ಈ ದೃಶ್ಯವನ್ನು ಸೆರೆಹಿಡಿಯಲಾಗಿದೆ.