alex Certify ಕಣ್ಣು ಕೆಂಪಾಗಿದ್ದರೆ ಅದನ್ನು ನಿವಾರಿಸಲು ಈ ಮನೆಮದ್ದನ್ನು ಬಳಸಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಣ್ಣು ಕೆಂಪಾಗಿದ್ದರೆ ಅದನ್ನು ನಿವಾರಿಸಲು ಈ ಮನೆಮದ್ದನ್ನು ಬಳಸಿ

ಕಣ್ಣಿಗೆ ಧೂಳು, ಕಸ ಹೋದಾಗ, ಹೆಚ್ಚು ಹೊತ್ತು ಕಂಪ್ಯೂಟರ್, ಲ್ಯಾಪ್ ಟಾಪ್ ಮುಂದೆ ಕೆಲಸ ಮಾಡುವುದರಿಂದ ಕಣ್ಣು ಕೆಂಪಾಗುತ್ತದೆ. ಇದರಿಂದ ಕಣ್ಣಿನಲ್ಲಿ ಉರಿ ಕಂಡುಬರುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ಈ ಮನೆಮದ್ದನ್ನು ಬಳಸಿ.

*ಸೌತೆಕಾಯಿ ಪೀಸ್ ನ್ನು ಕತ್ತರಿಸಿ 10 ನಿಮಿಷಗಳ ಕಾಲ ನಿಮ್ಮ ಕಣ್ಣುಗಳ ಮೇಲೆ ಇಟ್ಟುಕೊಳ್ಳಿ. ಇದು ಕಣ್ಣಿನ ಕಿರಿಕಿರಿ, ಊತವನ್ನು ಕಡಿಮೆ ಮಾಡುತ್ತದೆ.

*ಟೀಯಲ್ಲಿರುವ ಟ್ಯಾನಿಕ್ ಆಮ್ಲ ಕಣ್ಣಿನ ಸಮಸ್ಯೆಗಳನ್ನು ನಿವಾರಿಸುತ್ತದೆ. ಹಾಗಾಗಿ ಟೀ ಬ್ಯಾಗ್ ಗಳನ್ನು ಕಣ್ಣಿನ ಮೇಲೆ ಇಟ್ಟುಕೊಂಡು ಮಲಗಿ, ಇದರಿಂದ ಕಣ್ಣು ಕೆಂಪಾಗಿದ್ದು ಕಡಿಮೆಯಾಗುತ್ತದೆ.

* ಒಣಗಿದ ಕ್ಯಾಮೊಮೈಲ್ ಹೂಗಳ ಪುಡಿಯನ್ನು ನೀರಿನೊಂದಿಗೆ ಸೇರಿಸಿ ಕುದಿಸಿ ಅದನ್ನು ಸೋಸಿ, ತಣ್ಣಗಾದ ಬಳಿಕ ಕಾಟನ್ ಪ್ಯಾಡ್ ನಲ್ಲಿ ಅದ್ದಿ ಕಣ್ಣಿನ ಮೇಲೆ ಇಟ್ಟುಕೊಳ್ಳಿ. ಇದರಿಂದ ಕಣ್ಣುಗಳಲ್ಲಿನ ತುರಿಕೆ, ಶುಷ್ಕತೆ, ಕೆಂಪಾಗಿದ್ದು ಕಡಿಮೆಯಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...