alex Certify ಕಣ್ಣೀರಿಡುವಂತೆ ಮಾಡುತ್ತೆ ಗಡಿ ದಾಟುತ್ತಿರುವ ಬಾಲಕನ ಕರುಣಾಜನಕ ಕತೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಣ್ಣೀರಿಡುವಂತೆ ಮಾಡುತ್ತೆ ಗಡಿ ದಾಟುತ್ತಿರುವ ಬಾಲಕನ ಕರುಣಾಜನಕ ಕತೆ….!

ರಷ್ಯಾವು ಉಕ್ರೇನ್​​​ನ ಮೇಲೆ ದಾಳಿ ನಡೆಸಿದಾಗಿನಿಂದ ದಿನಕ್ಕೊಂದರಂತೆ ಮನಕಲಕುವ ದೃಶ್ಯಗಳು ಸೋಶಿಯಲ್​ ಮೀಡಿಯಾಗಳಲ್ಲಿ ಹರಿದಾಡುತ್ತಲೇ ಇದೆ. ಇದೇ ಮಾತಿಗೆ ಸ್ಪಷ್ಟ ಉದಾಹರಣೆ ಎಂಬಂತೆ ಉಕ್ರೇನ್​ನಿಂದ ಬಾಲಕನು ನಿರ್ಗಮಿಸುವ ಹೃದಯವಿದ್ರಾವಕ ವಿಡಿಯೋವೊಂದು ವೈರಲ್​ ಆಗಿದೆ.

ಉಕ್ರೇನ್​ನ ಮೇಲಿನ ರಷ್ಯಾದ ಮಿಲಿಟರಿ ಕಾರ್ಯಾಚರಣೆಯಲ್ಲಿ ಸಾಕಷ್ಟು ಮಂದಿ ತಮ್ಮ ಜೀವವನ್ನು ಕಳೆದುಕೊಂಡಿದ್ದಾರೆ. ಯುದ್ಧಪೀಡಿತ ಸ್ಥಳದಿಂದ ಗಡಿಯನ್ನು ದಾಟಲು ಇನ್ನಿಲ್ಲದ ಹರಸಾಹಸವನ್ನು ಪಡುತ್ತಿದ್ದಾರೆ. ಈ ಎಲ್ಲದರ ನಡುವೆ ಉಕ್ರೇನ್​​ನಿಂದ ಪುಟ್ಟ ಬಾಲಕನೊಬ್ಬ ಪೋಲೆಂಡ್​ನ ಮೆಡಿಕಾಗೆ ಅಳುತ್ತಾ ನಡೆದುಕೊಂಡು ಹೋಗುವ ದೃಶ್ಯ ಕರುಳು ಹಿಂಡುವಂತಿದೆ.

ಕೈಯಲ್ಲೊಂದು ಚೀಲವನ್ನು ಹಿಡಿದು ಸ್ವೆಟರ್​ನ್ನು ಧರಿಸಿದ್ದ ಬಾಲಕ ಕಣ್ಣೀರಿಡುತ್ತಾ ಭಾರವಾದ ಹೆಜ್ಜೆಯನ್ನಿಟ್ಟಿದ್ದಾನೆ. ಈ ದೃಶ್ಯವು ಕರುಣಾಜನಕವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...