ರಷ್ಯಾವು ಉಕ್ರೇನ್ನ ಮೇಲೆ ದಾಳಿ ನಡೆಸಿದಾಗಿನಿಂದ ದಿನಕ್ಕೊಂದರಂತೆ ಮನಕಲಕುವ ದೃಶ್ಯಗಳು ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಲೇ ಇದೆ. ಇದೇ ಮಾತಿಗೆ ಸ್ಪಷ್ಟ ಉದಾಹರಣೆ ಎಂಬಂತೆ ಉಕ್ರೇನ್ನಿಂದ ಬಾಲಕನು ನಿರ್ಗಮಿಸುವ ಹೃದಯವಿದ್ರಾವಕ ವಿಡಿಯೋವೊಂದು ವೈರಲ್ ಆಗಿದೆ.
ಉಕ್ರೇನ್ನ ಮೇಲಿನ ರಷ್ಯಾದ ಮಿಲಿಟರಿ ಕಾರ್ಯಾಚರಣೆಯಲ್ಲಿ ಸಾಕಷ್ಟು ಮಂದಿ ತಮ್ಮ ಜೀವವನ್ನು ಕಳೆದುಕೊಂಡಿದ್ದಾರೆ. ಯುದ್ಧಪೀಡಿತ ಸ್ಥಳದಿಂದ ಗಡಿಯನ್ನು ದಾಟಲು ಇನ್ನಿಲ್ಲದ ಹರಸಾಹಸವನ್ನು ಪಡುತ್ತಿದ್ದಾರೆ. ಈ ಎಲ್ಲದರ ನಡುವೆ ಉಕ್ರೇನ್ನಿಂದ ಪುಟ್ಟ ಬಾಲಕನೊಬ್ಬ ಪೋಲೆಂಡ್ನ ಮೆಡಿಕಾಗೆ ಅಳುತ್ತಾ ನಡೆದುಕೊಂಡು ಹೋಗುವ ದೃಶ್ಯ ಕರುಳು ಹಿಂಡುವಂತಿದೆ.
ಕೈಯಲ್ಲೊಂದು ಚೀಲವನ್ನು ಹಿಡಿದು ಸ್ವೆಟರ್ನ್ನು ಧರಿಸಿದ್ದ ಬಾಲಕ ಕಣ್ಣೀರಿಡುತ್ತಾ ಭಾರವಾದ ಹೆಜ್ಜೆಯನ್ನಿಟ್ಟಿದ್ದಾನೆ. ಈ ದೃಶ್ಯವು ಕರುಣಾಜನಕವಾಗಿದೆ.